ವರದಿ : ರತ್ನಾಕರ ಗೌಂಡಿ
ಬೆಳಗಾವಿ : ನಗರದಲ್ಲಿಂದು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಈ ಬೈಸಿಕಲ್, ಎಲೆಕ್ಟ್ರಿಕಲ್ ಬೈಕ್ ಸೇವೆಯನ್ನು ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ್ ಹಾಗೂ ಸ್ಮಾರ್ಟ್ ಸಿಟಿ ಎಮ್ ಡಿ ಪ್ರವೀಣ್ ಬಾಗೇವಾಡಿ ನಗರದಲ್ಲಿ ಈ ಬೈಸಿಕಲ್ ಸೇವೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಈ ಬೈಸಿಕಲ್ ಸೇವೆಗೆ ಬೆಳಗಾವಿ ಮಹಾನಗರ ಪಾಲಿಕೆ 20 ಸ್ಥಾನಗಳನ್ನು ಗುರುತಿಸಿದ್ದು, ಹೆಚ್ಚಿನ ಜನಸಂಖ್ಯೆ, ಜನ ಸಂಚರಿಸುವಂತ ಸ್ಥಳಗಳಾಗಿವೆ. ಬೈಸಿಕಲ್ 3 ಪ್ರಕಾರಗಳ ವಾಗಿದ್ದು ಮೊದಲನೆಯದು ಸಾಮಾನ್ಯ ಬೈಸಿಕಲ್ ಇದ್ದು 2ನೇದು ಎಲೆಕ್ಟ್ರಿಕಲ್ ಪಡಲ್ ಬೈಸಿಕಲ್, ಮೂರನೇದು ಈ – ಬೈಕ್ ಪ್ರಕಾರಗಳವಾಗಿವೆ.
ಇನ್ನು ಇದರ ನಿರ್ವಹಣೆಯನ್ನು ಯಾನ ಸಂಸ್ಥೆ ಮೂರು ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿದೆ. ಜನರು ಇದನ್ನು ಹತ್ತು ರೂಪಾಯಿಗಳಿಂದ ಇಪ್ಪತ್ತು ರೂಪಾಯಿಗಳವರೆಗೆ ಪಾವತಿಸಿ ಉಪಯೋಗಿಸಬಹುದು ಎಂದು ಪ್ರವೀಣ್ ಬಾಗೇವಾಡಿ ಕುರಿತು ಮಾಹಿತಿ ನೀಡಿದರು.
ಡಿಸೆಂಬರ್ 19 ರಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಈ ಬೈಸಿಕಲ್ ಅನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗುವುದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರು ಹೇಳಿದರು.
ಶಾಸಕ ಅನಿಲ್ ಬೆನಕೆ ಮಾತನಾಡಿ, ಬೆಳಗಾವಿ ನಗರ ಸ್ವಚ್ಛ ಹಾಗೂ ಮಾಲಿನ್ಯ ರಹಿತವಾಗಿರಲು ಹಾಗೂ ಜನದಟ್ಟಣೆ ಸಂಚಾರ ದಟ್ಟಣೆ ಯನ್ನು ನಿರ್ವಹಿಸಲು ಈ ಬೈಸಿಕಲ್ ಉಪಯುಕ್ತವಾಗಲಿದೆ. ಈ ಸೇವೆಯನ್ನು ಬೆಳಗಾವಿ ಜನತೆ ಉಪಯೋಗಿಸಿಕೊಳ್ಳಬೇಕೆಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್, ಮಹಾನಗರ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಶ್ರೇಯಸ್ ನಕಾಡಿ ಮುಂತಾದವರು ಉಪಸ್ಥಿತರಿದ್ದರು.