ಹುಬ್ಬಳ್ಳಿ : ಅವಧಿ ಪೂರ್ವ ಚುನಾವಣೆ ಮಾಡುವ ಯೋಚನೆ ನಮ್ಮ ಸರ್ಕಾರ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ, ಜನರಿಗೆ ನಮ್ಮ ಕಾರ್ಯಕ್ರಮ ಮುಟ್ಟಿಸಿ, ಆ ವರದಿಯ ಆಧಾರದ ಮೇಲೆ ಸಕಾರಾತ್ಮಕ ಜನಾದೇಶ ಪಡೆಯಲು ನಾವು ಪ್ರಯತ್ನ ಮಾಡುತ್ತಿದ್ದೇವೆ.
ಚುನಾವಣೆ ಮುಂಚೆಯಾಗುತ್ತದೆ ಜಗಳವಾಡಬೇಡಿ ಎಂದು ಕಾಂಗ್ರೆಸ್ ನ ಕಾರ್ಯಕರ್ತರಿಗೆ ನೀಡಿರುವ ಸಂದೇಶ ಎಂದರು.
ನಾಳೆ ಕೋವಿಡ್ ಕುರಿತು ಕಂದಾಯ ಸಚಿವರು ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಸಭೆ ನಡೆಸಲಿದ್ದು, ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಮುಂತಾದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.