spot_img
23.5 C
Belagavi
Sunday, December 4, 2022
spot_img

2 ಕೋಟಿ ರೂ. ಗೆ ಮಾರಾಟಕ್ಕಿದೆ ಗ್ರಾಮ 

ಸ್ಪೇನ್ : ಮೂರು ದಶಕಗಳಿಂದ ಯಾರೂ ವಾಸಿಸದ ಸ್ಪೇನ್‌ ದೇಶದ ಸಂಪೂರ್ಣ ಗ್ರಾಮವೊಂದನ್ನು 2 ಕೋಟಿ ರೂಪಾಯಿಗಳಿಗೆ ಮಾರಾಟಕ್ಕೆ ಇಡಲಾಗಿದೆ.

ಪೋರ್ಚುಗಲ್‌ನ ಗಡಿಯಲ್ಲಿರುವ ಸ್ಪೇನ್‌ನ ಸಾಲ್ಟೊ ಡಿ ಕ್ಯಾಸ್ಟ್ರೊ ಎಂಬ ಹಳ್ಳಿಯು ಸುಮಾರು ರೂ. 2 ಕೋಟಿ 16 ಲಕ್ಷ ಮಾರಾಟಕ್ಕಿದೆ ಎಂದು ಸ್ಪಾನಿಷ್ ಪ್ರಾಪರ್ಟಿ ರಿಟೇಲ್ ವೆಬ್‌ಸೈಟ್ ಐಡಿಯಲಿಸ್ಟಾದಲ್ಲಿ ಪಟ್ಟಿ ಮಾಡಲಾಗಿದೆ.

44 ಮನೆಗಳು, ಹೋಟೆಲ್, ಚರ್ಚ್, ಶಾಲೆ, ಪುರಸಭೆಯ ಈಜುಕೊಳ ಮತ್ತು ಬ್ಯಾರಕ್‌ಗಳ ಕಟ್ಟಡವನ್ನು ಹೊಂದಿರುವ ಗ್ರಾಮವು ಪ್ರವಾಸಿ ತಾಣವಾಗಿ ಹೊರಹೊಮ್ಮುವ ನಿರೀಕ್ಷೆಯಿತ್ತು. ಆದರೆ ಯೂರೋಜೋನ್ ಬಿಕ್ಕಟ್ಟಿನಿಂದಾಗಿ ಇದು ಕಾರ್ಯರೂಪಕ್ಕೆ ಬರಲಿಲ್ಲ. ಮಾರಾಟಕ್ಕಿರುವ ಗ್ರಾಮವು ಮ್ಯಾಡ್ರಿಡ್‌ನಿಂದ ಕೆಲವು ಗಂಟೆಗಳ ಪ್ರಯಾಣದ ದೂರದಲ್ಲಿದೆ.

ರಿಟೇಲ್ ಆಸ್ತಿ ವೆಬ್‌ಸೈಟ್‌ನಲ್ಲಿ ಈಗ ಹೊಸದಾಗಿ ಹರಾಜು ಜಾಹೀರಾತು ಪ್ರಕಟಿಸಲಾಗಿದೆ. ಈಗ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ ಮತ್ತು ರಷ್ಯಾದ ಸುಮಾರು 300ಕ್ಕೂ ಹೂಡಿಕೆದಾರರು ಗ್ರಾಮದ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, 1950 ರ ದಶಕದಿಂದ ವಿದ್ಯುತ್ ಉತ್ಪಾದನಾ ಸಂಸ್ಥೆಯೊಂದು ಸಾಲ್ಟೊ ಡಿ ಕ್ಯಾಸ್ಟ್ರೊದಲ್ಲಿ ಹತ್ತಿರದ ಜಲಾಶಯವನ್ನು ನಿರ್ಮಿಸುತ್ತಿರುವ ಉದ್ಯೋಗಿಗಳಿಗೆ ಈ ಗ್ರಾಮದಲ್ಲಿ ವಸತಿ ವ್ಯವಸ್ಥೆ ಮಾಡಿತ್ತು. ಆದರೆ, ಯೋಜನೆ ಪೂರ್ಣಗೊಂಡ ಬಳಿಕ ಗ್ರಾಮ ನಿರ್ಜನವಾಗಿತ್ತು.

Related News

50 ಲಕ್ಷ ರೂ,ಗಳ ವೆಚ್ಚದಲ್ಲಿ ಮಂಡೋಳಿ ಗ್ರಾಮದ ರಸ್ತೆಗಳ ಅಭಿವೃದ್ಧಿ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಂಡೋಳಿ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಗಣಿ ನಿಧಿಯ ವತಿಯಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು 50 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿದ್ದು, ಶನಿವಾರ...

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುಂದುವರಿದ ಅಭಿವೃದ್ಧಿ ಯೋಜನೆಗಳ ಸರಣಿ

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 60 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಶನಿವಾರ ಕಾಂಕ್ರೀಟ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -