ಬೆಳಗಾವಿ: ಗ್ರಾಮದಲ್ಲಿ ಗುಟ್ಕಾ ವಿಚಾರಕ್ಕೆ ಶುರುವಾಗ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳದಲ್ಲಿ ನಡೆದಿದೆ.
೪೫ ವರ್ಷದ ಮಂಜುನಾಥ್ ಸುಣಗಾರ ಕೊಲೆಯಾದ ವ್ಯಕ್ತಿ. ಅಜಯ್ ಹಿರೇಮಠ ಎಂಬಾತಕೊಂದು ಪರಾರಿಯಾಗಿದ್ದಾನೆ.ಇಬ್ಬರು ಕುಡಿದು ಪಾನ್ ಶಾಪ್ ಬಳಿ ನಿಂತಿದ್ದರು. ಗುಟ್ಕಾ ತಿಂದು ಉಗುಳಿದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಉಂಟಾಗಿದೆ.
ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ಅಜಯ್ ಹಿರೇಮಠ ಮಂಜುನಾಥ್ ಅವರನ್ನು ಅಟ್ಟಾಡಿಸಿದ್ದಲ್ಲದೆ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ.
ಈ ವೇಳೆ ಮಂಜುನಾಥ್ ಬಿದ್ದು ಒದ್ದಾಡಿದ್ದಾನೆ. ಸ್ಥಳದಿಂದ ಆರೋಪಿ ಅಜಯ್ ಪರಾರಿಯಾಗಿದ್ದು, ಈ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.