Ad imageAd image

ರಾಜ್ಯ ಸರ್ಕಾರ ನಿಜವಾಗಲೂ ಜನರ ಸಹಾಯಕ್ಕೆ ಬರಬೇಕು ಈರಣ್ಣ ಕಡಾಡಿ

ratnakar
ರಾಜ್ಯ ಸರ್ಕಾರ ನಿಜವಾಗಲೂ ಜನರ ಸಹಾಯಕ್ಕೆ ಬರಬೇಕು ಈರಣ್ಣ ಕಡಾಡಿ
WhatsApp Group Join Now
Telegram Group Join Now

ಬೆಳಗಾವಿ: ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯಿಂದ ಆಗಿರುವ ಪ್ರವಾಹ ಹಾಗೂ ನೆರೆ ಗಳಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ ಅದಕ್ಕಾಗಿ ರಾಜ್ಯ ಸರ್ಕಾರ ಜನರ ಸಹಾಯಕ್ಕೆ ಬರಬೇಕೆಂದು ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ಅವರು ಆಗ್ರಹ ಮಾಡಿದ್ದಾರೆ

ಬೆಳಗಾವಿ ನಗರದ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಸದ ಈರಣ್ಣ ಕಡಾಡಿ ಬೆಳಗಾವಿ ಜಿಲ್ಲೆಯಾದ್ಯಂತ ಬಹಳ ದೊಡ್ಡ ಪ್ರಮಾಣದ ಮಳೆಯಾಗಿದ್ದು ಇದರಿಂದಾಗಿ ಮಹಾರಾಷ್ಟ್ರದ ಕೊಯ್ನಾ ಮತ್ತು ರಾಜಪುರ್ ಡ್ಯಾಮ್ಗಳಿಂದ 2. 97000 ಕ್ಯೂಬ್ ಕೇಸ್ ನೀರು ಬಿಡುಗಡೆ ಮಾಡಲಾಗಿದೆ.

ಹಾಗೂ ಘಟಪ್ರಭಾ ನದಿಗು ಕೂಡ 74000ಕ್ಯೂಕೆಎಸ್ ನೀರು ಬಿಡುಗಡೆ ಮಾಡಲಾಗಿದೆ ಇದರಿಂದಾಗಿ ಜಿಲ್ಲೆಯ 47 ಬ್ರಿಜ್ ಗಳು ಮುಳುಗಡೆಯಾಗಿದ್ದು ಸಾರಿಗೆ ಸಂಪರ್ಕ ಕಡಿತಗೊಂಡಿದೆ ಈಗಾಗಲೇ ಜಿಲ್ಲಾಡಳಿತ 40 ರಿಂದ 50 ಕಡೆಗಳಿಗೆ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದು ಸುಮಾರು 15 ರಿಂದ20.000 ಕಾಳಜಿ ಕೇಂದ್ರಗಳಲ್ಲಿ ಜನರು ಆಶ್ರಯ ಪಡೆದಿದ್ದು 6000 ಜನ ತಮ್ಮ ಸಂಬಂಧಿಕರ ಮನೆಗಳಲ್ಲಿ ಆಸರೆ ಪಡೆದಿದ್ದಾರೆ .

ಹಾಗೂ ಇಲ್ಲಿಯವರೆಗೆ 7 ಜನ ಮೃತಪಟ್ಟಿದ್ದಾರೆ ,
ಹಾಗೂ 50 ಹೆಕ್ಟರ್ ಕೃಷಿ ಜಮೀನು ನೀರಿನಲ್ಲಿ ಮುಳುಗಿದೆ ರೈತರ ಪಂಪ್ಸೆಟ್ಟುಗಳು ವಿದ್ಯುತ್ ಟ್ರಾನ್ಸ್ಫರ್ ಮಗಳು ನೀರಿನಲ್ಲಿ ಮುಳುಗಿ ಹೋಗಿವೆ ಇದ್ದರೆ ಇದರಿಂದಾಗಿ ಜನರು ತೀವ್ರ ಸಂಕಟ ಎದುರು ಸುತ್ತಿದ್ದಾರೆ ಕೂಡಲೇ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲಾಧಿಕಾರಿಗಳ ಬಳಿ ಇರುವ ಪೀಡಿ 48 ಕೋಟಿ ಹಾಗೂ 19 ಕೋಟಿ ಅನುದಾನ ಡಿಸಿ ಅವರ ಬಳಿ ಇದೆ ಅದನ್ನು ಕೂಡಲೇ ಪ್ರವಾಹ ಬಳಕೆ ಮಾಡಲು ಸರ್ಕಾರ ಅನುಮತಿ ನೀಡಬೇಕಾಗಿದೆ. ಅದರಂತೆ ಬಿಜೆಪಿ ಆಡಳಿತ ಅವಧಿಯಲ್ಲಿ ಮನೆಯ ಪರಿಹಾರಕ್ಕೆ 5 ಲಕ್ಷ ಪರಿಹಾರ ನಿಧಿಯನ್ನು ನೀಡಲಾಗುತ್ತಿತ್ತು ಅದನ್ನು ಈಗ ಒಂದು 1.25000 ಕೇಳಿಸಿದ್ದಾರೆ ಇದರಿಂದ ಯಾವುದೇ ರೀತಿಯ ಅನುಕೂಲ ಜನರಿಗೆ ವಾಗದು ಅದಕ್ಕಾಗಿ ಸರ್ಕಾರ ಈ ಕಡೆ ಗಮನ ಹರಿಸಬೇಕು ಅಲ್ಲದೇ ರಸ್ತೆಗಳು ಮತ್ತು ಬ್ರಿಜ್ ಗಳಿಗೆ ರಿಪೇರಿ ಕಾಮಗಾರಿ ಪ್ರಾರಂಭಿಸಬೇಕು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಸರ್ಕಾರಕ್ಕೆ ಆಗ್ರಹ ಮಾಡಿದರು.

WhatsApp Group Join Now
Telegram Group Join Now
Share This Article