ಬೆಂಗಳೂರು: ಅರಣ್ಯ ಇಲಾಖೆಯಲ್ಲಿನ ಅರಣ್ಯ ರಕ್ಷಕ ವೃಂದದ ಹುದ್ದೆಯನ್ನು ಗಸ್ತು ಅರಣ್ಯ ಪಾಲಕ ಎಂಬುದಾಗಿ ಪುನರ್ ಪದನಾಮೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 03-01-2022, 11-05-2022 ಮತ್ತು 27-05-2022ರಂದು ನಡೆಸಿದಂತ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅರಣ್ಯ ರಕ್ಷಕರು ಎಂಬ ಪದನಾಮವನ್ನು ಗಸ್ತು ಅರಣ್ಯ ಪಾಲಕರು ಎಂದು ಬದಲಾವಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಸಲ್ಲಿಸಿದಂತ ಪ್ರಸ್ತಾವನೆ ಹಿನ್ನಲೆಯಲ್ಲಿ ಅರಣ್ಯ ರಕ್ಷಕ ಹುದ್ದೆಯ ವೇತನ ಶ್ರೇಣಿ, ನೇಮಕಾತಿ ವಿಧಾನ ಅಥವಾ ಕರ್ತವ್ಯ ಮತ್ತು ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಅರಣ್ಯ ರಕ್ಷಕ ಪದನಾವನ್ನು ಗಸ್ತು ಅರಣ್ಯ ಪಾಲಕರು ಎಂದು ಮರು ಪದನಾಮಿಕರಿಸಿ ಆದೇಶಿಸಿದ್ದಾರೆ.