ಬೆಂಗಳೂರು : ಕಂದಾಯ ಇಲಾಖೆಯ ಎಲ್ಲಾ ವರ್ಗಾವಣೆಗಳಿಗೆ ತಡೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಆರೋಗ್ಯ ಇಲಾಖೆಯ ವರ್ಗಾವಣೆಗಳಿಗೆ ತಡೆ ನೀಡಿ ಆದೇಶ ಹೊರಡಿಸಿದ್ದ ಸರ್ಕಾರ, ಇದೀಗ ಕಂದಾಯ ಇಲಾಖೆಯ ಎಲ್ಲಾ ವರ್ಗಾವಣೆಗಳಿಗೆ ತಡೆ ನೀಡಿದೆ.
ಚುನಾವಣಾ ಆಯೋಗ ಮತದಾರರ ಪಟ್ಟಿಯ ನೋಂದಣಿ, ಪರಿಷ್ಕರಣಾ ಕಾರ್ಯ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸಿಬ್ಬಂದಿಗಳ ವರ್ಗಾವಣೆ ಮಾಡದಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಜನವರಿ-2023ರ ಎರಡನೇ ವಾರದವರೆಗೆ ವಿಲೇ ಇಡಲು ಸೂಚನೆ ನೀಡಿದ್ದಾರೆ. ಸರ್ಕಾರದ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ ಕೆ. ಲತಾ ಆದೇಶದಲ್ಲಿ ತಿಳಿಸಿದ್ದಾರೆ.