ಬೆಳಗಾವಿ: ಜಿಲ್ಲೆಯಲ್ಲಿ ಠಾಣಾಸರಹದ್ದಿಯಲ್ಲಿ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಪ್ರಾರಂಭ ಮಾಡಿದ್ದೇವೆ ಫೇಸ್ಬುಕ್ ಟ್ಯೂಟರ್ ವಾಟ್ಸಾಪ್ ಅಥವಾ ಮತ್ತೆ ಯಾವುದೇ ಸೋಶಿಯಲ್ ಮೀಡಿಯಾ ದಲ್ಲೇ ಅವಹೇಳನಕಾರಿ ಪೋಸ್ಟ್ ಮಾಡಿದ್ದಲ್ಲಿ ನಮ್ಮ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ತಂಡ ತಕ್ಷಣವೇ ಕಾರ್ಯ ನಿರ್ವಹಿಸಲಿದೆ ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಎಸ್ ಎನ್ ಸಿದ್ದರಾಮಪ್ಪ ಹೇಳಿದರು.
ಮಾದ್ಯಮದೊಂದಿಗೆ ಮಾತನಾಡಿದ ಅವರು ಸಮಾಜದ ಶಾಂತಿ ಸುವ್ಯವಸ್ಥೆ ಹಾಳು ಮಾಡುವಂತಹ ಪೋಸ್ಟ್ಗಳು ಹಾಕಿದರೆ ಅವರ ಮೇಲೆ ಸ್ವಯಂವಾಗಿ ಕೇಸ್ ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಜರ ಧರ್ಮ ನಾಯಕರಗಳ, ಜಾತಿ ಈ ವಿಷಯಗಳ ಕುರಿತು ಹೇಳಣಕಾರಿ ಪೋಸ್ಟ್ ಮಾಡಿದ್ದಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಖಡೆ ಬಜಾರ್ ಮತ್ತು ಶಹಪುರ್ ಠಾಣೆಗಳಲ್ಲಿ ವ್ಯಾಪ್ತಿಯಲ್ಲಿ ಎರಡು ಕೇಸುಗಳು ಪತ್ತೆಯಾಗಿದ್ದು ಎರಡು ವ್ಯಕ್ತಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ . ಸೋಶಿಯಲ್ ಮೀಡಿಯಾ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ರೂಪಿಸಲಾಗುತ್ತಿದೆ. ಹಾಗೂ ಸಮಾಜದ ಶಾಂತಿ ಸುವ್ಯವಸ್ಥೆ ಹಾಳು ಮಾಡಬಾರದೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು