spot_img
spot_img
spot_img
29.1 C
Belagavi
Wednesday, October 5, 2022
spot_img

ಕಾಮಗಾರಿಗೆ ಚಾಲನೆ ನೀಡಲು ಬಂದ ಶಾಸಕಿಯನ್ನು ಕಂಡು ಸಂಭ್ರಮಿಸಿದ ಜನರು

spot_img

ಬೆಳಗಾವಿ  : ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಕಂಡೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನತೆಗೆ ಎಲ್ಲಿಲ್ಲದ ಪ್ರೀತಿ, ನಂಟು. ಶಾಸಕಿ ಎನ್ನುವುದಕ್ಕಿಂತ ತಮ್ಮದೇ ಮನೆ ಮಗಳನ್ನು ಕಂಡಷ್ಟು ಇಷ್ಟ. ಲಕ್ಷ್ಮಿ ಹೆಬ್ಬಾಳಕರ್ ಕ್ಷತ್ರದ ಯಾವ ಹಳ್ಳಿಗೆ ಹೋದರೂ ಅಲ್ಲಿನ ಮಹಿಳೆಯರು ಬಂದು ತಬ್ಬಿಕೊಳ್ಳುತ್ತಾರೆ, ಹಿರಿಯರು ಬಂದು ಆಶಿರ್ವದಿಸುತ್ತಾರೆ, ಮಕ್ಕಳು ಬಂದು ನಲಿದಾಡುತ್ತಾರೆ, ಯುವಕ -ಯುವತಿಯರು ಬಂದು ಅಕ್ಕನ ಜೊತೆ ಸೆಲ್ಫಿಗೆ ಮುಗಿಬೀಳುತ್ತಾರೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರದಲ್ಲಿ ಅಂತದ್ದೊಂದು ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಎಲ್ಲರ ವಿಶ್ಸಾಸ ಗಳಿಸಿಕೊಂಡಿರುವ ಅವರು, ಕ್ಷೇತ್ರದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ. ಬದುಕಿಗೆ ಉತ್ಸಾಹ ತುಂಬಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ತೋರಿಸುತ್ತಿದ್ದಾರೆ. ಶಾಸಕರೆಂದು ಯಾವುದೇ ಅಹಂ ಇಲ್ಲದೆ, ಯಾವುದೇ ಅಂತರ ಕಾಯ್ದುಕೊಳ್ಳದೆ ಅಕ್ಷರಶಃ ಗ್ರಾಮೀಣ ಕ್ಷೇತ್ರದ ಕುಟುಂಬದ ಸದಸ್ಯರಂತೆ ನಡೆದುಕೊಳ್ಳುತ್ತಿದ್ದಾರೆ.

ಸೋಮವಾರ ಲಕ್ಷ್ಮಿ ಹೆಬ್ಬಾಳಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂಕಲ್ಪ ಲೇಔಟ್, ಟೀಚರ್ಸ್ ಕಾಲೋನಿ ಹಾಗೂ ಮರಾಠಾ ಕಾಲೋನಿಗಳ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿಯ ಸಲುವಾಗಿ ತೆರಳಿದಾಗ ಅಲ್ಲಿನ ಜನ ತೋರಿದ ಪ್ರೀತಿ, ಅಕ್ಕರೆಯೇ ಇದಕ್ಕೆಲ್ಲ ಸಾಕ್ಷಿ. ಶಾಸಕರು ಬಂದರು ಎಂದು ಯಾರಿಗೂ ಅನಿಸಿಯೇ ಇಲ್ಲ. ತಮ್ಮದೇ ಮನೆೆಯ ಮಗಳು ಬಂದಳು ಎನ್ನುವ ರೀತಿಯಲ್ಲಿ ಸಂಭ್ರಮಿಸಿದರು. ಹಿರಿಯರು, ಅಜ್ಜಿಯರು ಬಂದು ತಲೆ ನೇವರಿಸಿದರು, ಆಶಿರ್ವದಿಸಿದರು. ಹೆಬ್ಬಾಳಕರ್ ಕೂಡ ಅಲ್ಲಿನ ಮಕ್ಕಳನ್ನು ಅಷ್ಟೇ ಪ್ರೀತಿಯಿಂದ ಸಲಹಿ, ಸಂತೈಸಿದರು.

ಇಲ್ಲಿನ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿಗೆ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ಅನುದಾನದ ವತಿಯಿಂದ 65 ಲಕ್ಷ ರೂ,ಗಳು ಮಂಜೂರಾಗಿದ್ದು, ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಹೆಬ್ಬಾಳಕರ್ ಭೂಮಿ ಪೂಜೆಯನ್ನು ನೆರವೇರಿಸಿ ಚಾಲನೆಯನ್ನು ನೀಡಿದರು.ಈ ಸಮಯದಲ್ಲಿ ಸ್ಥಳೀಯ ಮುಖಂಡರು, ಹಿರಿಯರು, ಸ್ಥಳೀಯ ನಿವಾಸಿಗಳು, ಪಾವುಸ್ಕರ್, ಕಪೀಲ ಸಾಂಬ್ರೆಕರ್, ಶಿಲ್ಪಾ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

spot_img

Related News

ಮುಜರಾಯಿ ಇಲಾಖೆಯ ಅನುದಾನವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ : ರಾಜು ಕಾಗೆ

ಬೆಳಗಾವಿ: ಮುಜರಾಯಿ ಇಲಾಖೆಯ ಅನುದಾನವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ‌ ಜೊಲ್ಲೆ ವಿರುದ್ಧ ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಐನಾಪೂರ ಪಟ್ಟಣದಲ್ಲಿ ಮಾತನಾಡಿರುವ...

ದುರ್ಗೆ ವೇಷ ಧರಿಸಿ ಹದಗೆಟ್ಟ ವಿರುದ್ಧ ಪ್ರತಿಭಟಿಸಿದ ಬಾಲಕಿ 

ಹುಬ್ಬಳ್ಳಿ : ದುರ್ಗೆಯ ವೇಷ ಧರಿಸಿ ಬಾಲಕಿಯೊಬ್ಬಳು ವೇಷ ಧರಿಸಿ ಹುಬ್ಬಳ್ಳಿಯಲ್ಲಿ ನೀರಿನ ಕೊಚ್ಚೆ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಡೆದಿದ್ದಾಳೆ. ಈ ವಿಡಿಯೋ ಮೂಲಕ ರಸ್ತೆಗಳ ದುರವಸ್ಥೆಯ ಬಗ್ಗೆ ಗಮನ ಸೆಳೆಯುವ ಪ್ರಯತ್ನದಲ್ಲಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -