ಬೆಂಗಳೂರು: ಹರಿಯಾಣದಲ್ಲಿ (Hariyana) ಬಿಜೆಪಿ (BJP) ಧೂಳಿಪಟ ಆಗುತ್ತದೆ ಎಂದು ವಿಪಕ್ಷಗಳು ಬೊಬ್ಬೆ ಹಾಕುತ್ತೀವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ ಎಂದು ವಿಪಕ್ಷಗಳು ಬೊಬ್ಬೆ ಹಾಕುತ್ತಿದ್ದವು. ಆದರೆ ಬಿಜೆಪಿ ಸತತವಾಗಿ ಮೂರನೇ ಬಾರಿಗೆ ಅಧಿಕಾರದತ್ತ ದಾಪುಗಾಲು ಇಡುತ್ತಿದೆ. 3ನೇ ಬಾರಿ ಬಿಜೆಪಿ ಅಧಿಕಾರದತ್ತ ಬರ್ತಿದೆ ಎನ್ನುವುದು ಸಂತೋಷದ ವಿಷಯವಾಗಿದೆ ಎಂದರು.
ಚುನಾವಣಾ ಫಲಿತಾಂಶ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಮಾತನಾಡಿ, ಚುನಾವಣಾ ಫಲಿತಾಂಶ ಬಿಜೆಪಿ ಪರವಾಗಿ ಬರುತ್ತಿದೆ ಎನ್ನುವದು ಮೇಲ್ನೋಟಕ್ಕೆ ಕಂಡು ಬರ್ತಿದೆ. ಇದೇ ಮುಂದುವರೆದರೆ ಬಿಜೆಪಿ ಬಹುಮತ ಶತಸಿದ್ದ. ಸಮೀಕ್ಷೆ ಫಲಿತಾಂಶಕ್ಕೆ ಅಜಗಜಾಂತರ ವ್ಯತ್ಯಾಸ ಇದೆ. ಬಿಜೆಪಿ ಎರಡೂ ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಬಹುದು. ಮೋದಿ ಅವರ ಕೆಲಸ, ವರ್ಚಸ್ಸು ಈ ಗೆಲುವು ತರಲಿದೆ. ಇದೇ ಟ್ರೆಂಡ್ ಇದ್ದರೆ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.
ವಿಜಯೇಂದ್ರ ಮಾತನಾಡಿ, ಇದು ನನ್ನ ವೈಯಕ್ತಿಕ ಅಭಿಪ್ರಾಯ ವರದಿ ಅವೈಜ್ಞಾನಿಕವಾಗಿ ಇದೆ. ಕಾಂಗ್ರೆಸ್ (Congress) ನಾಯಕರು ಸಹ ಇದೇ ಹೇಳಿದ್ದಾರೆ. ಬಿಜೆಪಿ ಸ್ಪಷ್ಟ ನಿಲುವನ್ನು ಹೊಂದಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ, ಹಿಂದುಳಿದ ದಲಿತ ವರ್ಗಕ್ಕೂ ಸಾಮಾಜಿಕ ನ್ಯಾಯ ಸಿಗಬೇಕು. ಈಗ ಸಿದ್ದರಾಮಯ್ಯ ಅವರ ಕುರ್ಚಿ ಅಲ್ಲಾಡುತ್ತಿದೆ. ಅದಕ್ಕಾಗಿ ಈಗ ಜಾತಿಗಣತಿ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ ಇದು ಅವೈಜ್ಞಾನಿಕ ಎಂದು ಶಾಮನೂರು ಹೇಳಿದ್ದಾರೆ. ಡಿಕೆಶಿ ಕೂಡ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದಿದ್ದಾರೆ. ಖರ್ಗೆ ಹೇಳಿದ್ದನ್ನು ಎಲ್ಲರೂ ಗಮನಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡೋಕೆ ಅವಕಾಶ ಇಲ್ಲ. ವರದಿ ಜಾರಿಗೆ ಯಾಕೆ ಇಷ್ಟೊಂದು ಆತುರ? ಈ ಮೊದಲು ನೀವೇ ಅಧಿಕಾರದಲ್ಲಿ ಇದ್ದಾಗ ಯಾಕೆ ಬಿಡುಗಡೆ ಮಾಡಿಲ್ಲ. ಖರ್ಚಿಯಲ್ಲಿ ಸಿದ್ದರಾಮಯ್ಯ ಜಾಸ್ತಿ ದಿನ ಇರುವುದಿಲ್ಲ. ಆದರೆ ಅವರ ಮೊಂಡುತನ ಜಾಸ್ತಿ ದಿನ ನಡೆಯಲ್ಲ. ಹೀಗಾಗಿ ಇದೊಂದು ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದರು.ಆರ್.ಅಶೋಕ್ ಮಾತನಾಡಿ, ಮುಡಾ ಹಗರಣ ಮುಚ್ಚಿ ಹಾಕಲು ಸಿದ್ದರಾಮಯ್ಯ (CM Siddaramaiah) ಇಲ್ಲಸಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿಯವರನ್ನು ಟೀಕಿಸುವ ಮೊದಲು ನಿಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎಂದು ನೋಡಿ. ನಿಮ್ಮ ಪಕ್ಷದಲ್ಲಿ ಸಿಎಂ ಆಗಲು ರನ್ನಿಂಗ್ ರೇಸ್ ನಡೆಯುತ್ತಿದೆ. ನಿತ್ಯ ಪ್ರತ್ಯೇಕ ಸಭೆಗಳನ್ನು ಮಾಡುತ್ತಿದ್ದಾರೆ. ಪರಸ್ಪರ ಸಭೆ ನಡೆಸಿ, ತಿಂಡಿ ಭಾಗ್ಯ ಮಾಡಿಕೊಂಡಿದ್ದಾರೆ. ಸಿಎಂ ಇಳಿಸಲು ಸಚಿವರು ಬ್ರೇಕ್‌ಫಾಸ್ಟ್ ಮೀಟಿಂಗ್, ಡಿನ್ನರ್ ಮೀಟಿಂಗ್‌ಗಳಲ್ಲಿ ಮುಳುಗಿದ್ದಾರೆ ಎಂದು ವ್ಯಂಗ್ಯವಾಡಿದರು.
ನಿಮ್ಮ ಪಕ್ಷದಲ್ಲೇ ಒಡಕಿದೆ, ಅದನ್ನು ಸರಿ ಮಾಡದೇ ಬಿಜೆಪಿ, ಜೆಡಿಎಸ್ (JDS) ಮೇಲೆ ವಕ್ರದೃಷ್ಟಿ ಬೀರುತ್ತಿದ್ದಾರೆ. ಸಿಎಂ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ? ಸಿಎಂ ಇಳಿತಾರೆ ಎಂದು ನಿಮ್ಮ ಪಕ್ಷದಲ್ಲೇ ದೊಡ್ಡ ಗಾಳಿ ಸುದ್ದಿ ಹಬ್ಬಿದೆ. ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಈ ಸರ್ಕಾರ ತೊಲಗಲಿ ಎಂದು ಜನ ಕೂಡ ಬಯಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.