ಬೆಳಗಾವಿ: ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವೃದ್ಧೆಯನ್ನು ಆಸ್ಪತ್ರೆ ಐಸಿಯುನಿಂದ ಸಹಿ ಮಾಡಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಿಬ್ಬಂದಿ ಕರೆಸಿಕೊಂಡಂತಹ ಅಮಾನವೀಯ ಘಟನೆ ಬೆಳಗಾವಿ ದಕ್ಷಿಣ ವಿಭಾಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದಿದೆ.
ಆಸ್ತಿಹಂಚಿಕೆ ಪತ್ರಕ್ಕೆ ಸಹಿ ಹಾಕುವ ವಿಚಾರಕ್ಕೆ ಐಸಿಯುನಿಂದ ಸ್ಟ್ರೆಚರ್ನಲ್ಲೇ 80 ವರ್ಷದ ವೃದ್ಧೆ ಮಹಾದೇವಿಯನ್ನು ಕುಟುಂಬಸ್ಥರು ಕರೆತಂದಿದ್ದಾರೆ.
ವೃದ್ಧೆ ಐಸಿಯುನಲ್ಲಿದ್ದ ಕಾರಣ ಆಸ್ಪತ್ರೆಗೆ ಬರಲು ಉಪನೋಂದಣಾಧಿಕಾರಿ ಪದ್ಮನಾಭ್ ಗುಡಿ ಅವರಿಗೆ ಮನವಿ ಮಾಡಲಾಗಿದೆ. ಆದರೆ ಮನವಿ ನಿರಾಕರಿಸಿದ್ದಾರೆ.
ಆಸ್ಪತ್ರೆಗೆ ಬಂದು ವೃದ್ಧೆ ಸಹಿ ಪಡೆಯಲು ಹಣಕ್ಕೆ ಬೇಡಿಕೆ ಆರೋಪ ಮಾಡಿದ್ದು, ಹಣ ನೀಡಲು ಒಪ್ಪದೇ ವೃದ್ಧೆಯನ್ನು ಕುಟುಂಬಸ್ಥರು ಕಚೇರಿಗೆ ಕರೆತಂದಿದ್ದಾರೆ. ಅಂಧ ಅಧಿಕಾರಿಯ ನಡುವಳಿಕೆಯಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.