ಬೆಂಗಳೂರು : ಹೊಸ ವರ್ಷಕ್ಕೆ ಅಬಕಾರಿ ಇಲಾಖೆಗೆ ಭರ್ಜರಿ ಲಾಭವಾಗಿದ್ದು, ಕೋಟಿ ಕೋಟಿ ಲಾಭಗಳಿಸಿದೆ. ನಿನ್ನೆ ಒಂದೇ ದಿನದ 181 ಕೋಟಿ ರೂಪಾಯಿ ಮೌಲ್ಯದ ಭರ್ಜರಿ ಮದ್ಯ ಮಾರಾಟವಾಗಿದೆ.
ಡಿಸೆಂಬರ್ 27ರಂದು 3.57 ಲಕ್ಷ ಲೀಟರ್ ಐಎಂಎಲ್ ಮಾರಾಟ ಮಾಡಿದ್ದು, 2.41 ಲಕ್ಷ ಲೀಟರ್ ಬಿಯರ್ ಮಾರಾಟ ನಡೆಸಿದೆ.
ಈ ಮೂಲಕ ಐದು ದಿನಗಳಲ್ಲಿ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಬರೋಬ್ಬರಿ 657 ಕೋಟಿ ಹರಿದು ಬಂದಿದೆ. ಡಿಸೆಂಬರ್ 23ರಿಂದ 20.66 ಲಕ್ಷ ಲೀಟರ್ IML, 15.04 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.