ತುಮಕೂರು, ನವೆಂಬರ್ ೨೯:ಎನ್ಪಿಎಸ್ ಬಿಟ್ಟು ಒಪಿಎಸ್ ಮುಂದುವರೆಸಬೇಕು ಬೇಡಿಕೆಯೂ ಸೇರಿದಂತೆ ನೌಕರರ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುವ ಹೊಣೆಗಾರಿಕೆ ನನ್ನ ಮೇಲಿದ್ದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎನ್.ನರಸಿಂಹರಾಜು, ಹೇಳಿದರು.
ಇಂದು ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ನಡೆದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನನ್ನ ಮೇಲೆ ವಿಶ್ವಾಸವಿಟ್ಟು ೨ನೇ ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಲು ಸಹಕರಿಸಿದ ಸಂಘದ ತಾಲೂಕು ಅಧ್ಯಕ್ಷರು, ನಿರ್ದೇಶಕರಿಗೆ, ಸರ್ಕಾರಿ ನೌಕರರಿಗೆ ಧನ್ಯವಾದ ತಿಳಿಸಿದ ಅವರು ಪರಸ್ಪರ ಸಹಮತದಿಂದ ಮೂರು ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆಮಾಡಲಾಗಿದ್ದು. ಈ ಮೂಲಕ ಜಿಲ್ಲಾ ಸರ್ಕಾರಿ ನೌಕರರ ಸಂಘ ರಾಜ್ಯದಲ್ಲಿಯೇ ಮಾದರಿ ಸಂಘ ಎಂದು ಹೆಸರು ಮಾಡಿದೆ ಎಂದರು.
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್, ಕೇಂದ್ರ ರ್ಯೇಲ್ವೆ ್ಯ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಸಹಕಾರ ಸಚಿವ ಕೆ.ಎನ್,ರಾಜಣ್ಣ ಹಾಗೂ ಶಾಸಕರ ಮಾರ್ಗ ದರ್ಶನದಲ್ಲಿ ಜಿಲ್ಲೆಯ ನೌಕರರಲ್ಲಿ ಯಾವುದೇ ಭಿನ್ನ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕರ್ತವ್ಯ ನಿರ್ವಹಿಸಲಾಗುವುದು ಎಂದರು.
ಕಡಿಮೆ ದರದಲ್ಲಿ ಸರ್ಕಾರಿ ನೌಕರರಿಗೆ ನಿವೇಶನ ಸರ್ಕಾರಿ ನೌಕರರೆಲ್ಲರೂ ಸ್ವಂತ ನಿವೇಶನ ಖರೀದಿಸಿ ಮನೆ ಕಟ್ಟಿಕೊಳ್ಳುವ ಕನಸು ಕಂಡಿರುತ್ತಾರೆ, ಈ ಕನಸುಗಳನ್ನು ಸಕಾರಗೊಳಿಸುವ ಉದ್ದೇಶದಿಂದ, ಬೇರೆ ಜಿಲ್ಲೇಗಳಲ್ಲಿರುವಂತೆ ನಮ್ಮಲ್ಲೂ ಮುಂದಿನ ದಿನಗಳಲ್ಲಿ ಉತ್ತಮವಾದ ಬಡಾವಣೆ ಮಾಡಿ ನೌಕರರಿಗೆ ಕಡಿಮೆ ದರದಲ್ಲಿ ಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು, ಎಂದು ಅಧ್ಯಕ್ಷ ಎನ್.ನರಸಿಂಹರಾಜು, ಭರವಸೆ ನೀಡಿದರು.
ಇದೀಗ ಜಿಲ್ಲೆಯಲ್ಲಿ ಅವಿರೋಧ ಆಯ್ಕೆ ಯಾಗುವ ಮೂಲಕ ನೌಕರರ ಸಂಘದಲ್ಲಿ ಯಾವುದೇ ಬಣವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ, ರಾಜ್ಯ ಪರಿಷತ್ ಸದಸ್ಯ, ಖಜಾಂಚಿ ಅವರನ್ನು, ಪದಾಧಿಕಾರಿಗಳು, ನಿರ್ದೇಶಕರು ನೌಕರರುಗಳು ಪುಷ್ಪ ಮಾಲಿಕೆ ಹಾಕಿ ಅಭಿನಂದನೆ ಸಲ್ಲಿಸಿದರು