ಬೆಂಗಳೂರು: ಲಂಬಾಣಿ ಜನಾಂಗ ನಂಬಿಕೆಗೆ ಅರ್ಹವಾದ ಜನಾಂಗ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬಂಜಾರ ಭವನ ಉದ್ಘಾಟಿಸಿ ಡಿಸಿಎಂ ‘ನನ್ನ 8 ಚುನಾವಣೆಯಲ್ಲಿ ಶೇ.99ರಷ್ಟು ಲಂಬಾಣಿ ಜನ ಮತ ಹಾಕಿದ್ದಾರೆ. ನಮ್ಮ ಸರ್ಕಾರ ಬರಲು ಲಂಬಾಣಿ ಜನಾಂಗ ಕೂಡ ಕಾರಣೀಭೂತರಾಗಿದ್ದಾರೆ. ಲಂಬಾಣಿ ಸಮುದಾಯಕ್ಕೆ ಸರ್ಕಾರದ ಎಲ್ಲಾ ಯೋಜನೆಗಳು ಸಿಗುತ್ತಿವೆ. ಸಂತ ಸೇವಾಲಾಲ್ ಕೇಂದ್ರಕ್ಕೆ ಈಗ ಉಚಿತವಾಗಿ ಹೋಗಿಬರಹುದು. ತಾಂಡಾಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ ಎಂದರು.