spot_img
spot_img
spot_img
21.1 C
Belagavi
Friday, September 30, 2022
spot_img

ಯಮಕನಮರಡಿಯಲ್ಲಿ ಯುವಕನ ಭೀಕರ ಕೊಲೆ 

spot_img

ಬೆಳಗಾವಿ: ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ವಿನಾಯಕ ಹೋರಕೇರಿ (28) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಬೈಕ್‌ನಲ್ಲಿ ಗ್ರಾಮಕ್ಕೆ ಮರಳುವಾಗ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಮನಬಂದಂತೆ ಹಲ್ಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶನಿವಾರವಷ್ಟೇ ಯುವಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಇನ್ನು ಕಳೆದ ವರ್ಷ ಸತೀಶ್ ಜಾರಕಿಹೊಳಿ ಆಪ್ತರೊಬ್ಬರ ಮೇಲೆ ಕೊಲೆಯಾದ ಯುವಕ ನಾಡಪಿಸ್ತೂಲಿನಿಂದ ಫೈರಿಂಗ್ ಮಾಡಿ ಪರಾರಿಯಾಗಿದ್ದನಂತೆ. ಇದಾಗಿ ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಯಮಕನಮರಡಿ ಪಿಎಸ್‌ಐ ಬಿ.ವಿ.ನಾಮ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

spot_img

Related News

ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ಧಿಡೀರ್ ದಾಳಿ

ಬೆಂಗಳೂರು : ರಾಜ್ಯದ ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ತಂಡ ಇಂದು ಧಿಡೀರ್ ದಾಳಿ ನಡೆಸಿದೆ. ವಾಹನ ಸವಾರರಿಂದ ಹಣ ವಸೂಲಿ ದೂರುಗಳು ಕೇಳಿ ಬಂದ ಹಿನ್ನೆಲೆ ಕಲಬುರಗಿ, ಬೀದರ್...

ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ 1 ವರ್ಷ ಜೈಲು, 50 ಸಾವಿರ ದಂಡ

ನವದೆಹಲಿ: ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ ಭಾರತೀಯ ದೂರಸಂಪರ್ಕ ಮಸೂದೆ 2022 ರ ಸಿದ್ಧಪಡಿಸಿದ ಕರಡು ಪ್ರತಿಯ ಪ್ರಕಾರ, ನೀವು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ 50,000...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -