spot_img
spot_img
spot_img
spot_img
spot_img
30.1 C
Belagavi
Sunday, December 3, 2023
spot_img

ಗಾಂಧಿ ಎಂಬ ಅಸ್ತ್ರದಿಂದಲೇ ಭದ್ರ ಭಾರತದ ಬುನಾದಿ

ಮೋಹನ್ ದಾಸ್ ಕರಮ್ ಚಂದ್ರ ಗಾಂಧಿ ಎನ್ನುವುದು ಕೇವಲ ಹೆಸರಲ್ಲ ಇದು ಭಾರತದ ಆತ್ಮ. ಸ್ವತಂತ್ರ ಹೋರಾಟದ ಅಸ್ತ್ರವಾಗಿದ್ದ ಗಾಂಧಿ ವಿಚಾರಗಳು ಇಂದಿಗೂ ಪ್ರಸ್ತುತ.

 

 

ಅಕ್ಟೋಬರ್ 2 ಮಹಾತ್ಮ ಗಾಂಧೀಜಿಯವರ ಜನ್ಮ ದಿನದಂದು ಇಡೀ ಮಾನವ ಕುಲಕ್ಕೆ ನೀಡಿದ ಕೊಡಗೆಗಳ ಸ್ಮರಣೆ ಮಾಡಲೇಬೇಕು. ಈ ದಿನವನ್ನ ಇಡೀ ವಿಶ್ವವೇ ಶಾಂತಿ ದಿನವೆಂದು ಆಚರಣೆ ಮಾಡುತ್ತದೆ. ಅವರ ಸತ್ಯ ಮತ್ತು ಅಹಿಂಸೆಯ ಮಾರ್ಗಗಳು ಜಗತ್ತಿನ ಅನೇಕ ನಾಯಕರುಗಳನ್ನು ಮಹಾತ್ಮರ ವ್ಯಕ್ತಿತ್ವಕ್ಕೆ ಪ್ರಭಾವಿತಗೊಳಿಸಿದ್ದವು.

ಪ್ರಮುಖವಾಗಿ ನೆಲ್ಸೇಲ್ ಮಂಡೇಲಾ, ಮೋಟಿನ್ ಲೆಥರ ಗಾಂಧೀಜಿಯವರ ಸತ್ಯಾಗ್ರಹ ಸ್ವಾತಂತ್ರ್ಯ ಮತ್ತು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಭದ್ಧರಾಗಿದ್ದರು.

ಗ್ರಾಮೀಣ ಸರ್ವಾಂಗಿನ ಅಭಿವೃದ್ಧಿ ಇಂದಾಗಿ ದೇಶದ ಅಭಿವೃದ್ಧಿವಾಗಲಿದೆ ಎಂಬ ದೃಢವಾದ ನಂಬಿಕೆ ಅವರದಾಗಿತ್ತು. ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಮಹಾತ್ಮ ಗಾಂಧೀಜಿ ಶತಕಗಳ ಹಿಂದೆಯೇ ಯೋಚನೆ ಮಾಡಿದ್ದರು.

ಅದರಂತೆ ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಮಹತ್ವವನ್ನು ಗಾಂಧೀಜಿಯವರು ನೀಡುತ್ತಿದ್ದರು. ಅದರ ಪರಿಕಲ್ಪನೆಯ ಪಲವಾಗಿ ಈಗ ಪಂಚಾಯತ್ ರಾಜ್ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳನ್ನು ಸದೃಢವಾಗಿ ಮತ್ತು ಪ್ರಗತಿ ಪರವಾಗಿ ನಡೆಸಿಕೊಂಡು ಬರುತ್ತಿದೆ.

ಪ್ರಜಾಪ್ರಭುತ್ವದ ತಳಹದಿಯ ಮೇಲೆ ಗ್ರಾಮ ಸ್ವರಾಜ್ ಗಾಂಧೀಜಿ ಕಂಡ ಕಲ್ಪನೆಯ ವಾಸ್ತುವತೆಯನ್ನು ದೇಶ ನೋಡುತ್ತಿದೆ.ಮಹಾತ್ಮ ಗಾಂಧೀಜಿಯವರ ಕರ್ನಾಟಕದ ನೆಲದಲ್ಲಿ ಅದು ಬೆಳಗಾವಿ ನಗರದಲ್ಲಿ ಮೊದಲ ಬಾರಿಗೆ ಗಾಂಧೀಜಿಯವರ 1924 ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಅಧಿವೇಶನಕ್ಕೆ ಈಗ ಒಂದು ನೂರು ವರ್ಷಗಳು ತುಂಬುತ್ತಿವೆ. ಬೆಳಗಾವಿ ಹಾಗೂ ಕರ್ನಾಟಕದ ಜನತೆಯ ಹೆಮ್ಮೆಯ ವಿಷಯವಾಗಿದೆ.
1918ರಲ್ಲಿ ಬಿಹಾರ್ ಮತ್ತು ಚಂಪಾರನ್ ಚಳುವಳಿ, ಅಸಹಕಾರ ಚಳುವಳಿ, ನಾಗರಿಕ ಅಸಹಕಾರ ಚಳುವಳಿ, ಸ್ವರಾಜ್ ಮತ್ತು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಗಾಂಧೀಜಿ ವಹಿಸಿದ ಪ್ರಮುಖ ಸ್ವಾತಂತ್ರ್ಯ ಚಳುವಳಿಗಳಾಗಿದ್ದವು.

ಗಾಂಧೀಜಿಯವರು ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಅವರ ನೇತೃತ್ವ ಎಷ್ಟು ಪ್ರಮುಖವಾಗಿತ್ತು ಎಂದರೆ ಜಗತ್ತೇ ಅವರ ಕಡೆ ನೋಡುವಂತಾಗಿತ್ತು. ಬ್ರಿಟಿಷರು ಅರೆ ಬತ್ತಲೆ ಪಕೀರ ನಮ್ಮನ್ನು ಏನು ಮಾಡಬಲ್ಲ ಎಂಬ ಭ್ರಮೆಯಲ್ಲಿ ಈಸ್ಟ್ ಇಂಡಿಯಾ ಕಂಪನಿ ಅಪಹಾಸ್ಯ ಮಾಡುತ್ತಿತ್ತು. ಆದರೆ ಮಹಾತ್ಮ ಗಾಂಧಿ ಸತ್ಯ ಮತ್ತು ಅಹಿಂಸ ಚಳುವಳಿಗಳಿಂದ ಸೂರ್ಯ ಮುಳುಗಲಾರದ ಸಾಮ್ರಾಜ್ಯವನ್ನು ಯಾವುದೇ ಅಸ್ತ್ರ ಶಸ್ತ್ರ ಗಳಿಲ್ಲದೆ ಕೊನೆಗೊಳಿಸಿದರು ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಗಡಿನಾಡಿನ ಗಾಂಧಿ ಅಬ್ದುಲ್ ಗಫಾರ್ ಖಾನ್ ಪಂಡಿತ್ ಜವಾಹರ್ಲಾಲ್ ನೆಹರು ಸರ್ದಾರ್ ವಲ್ಲಭ ಪಟೇಲ್ ಮೌಲಾನ ಅಜಾದ್ ಸರೋಜಿನಿ ನಾಯ್ಡು ಅನೇಕ ಅನೇಕ ಸ್ವತಂತ್ರ ಸೇನಾನಿಗಳು ಅವರ ನೇತೃತ್ವದಲ್ಲಿ ಸ್ವತಂತ್ರ ಸಂಗ್ರಾಮಕ್ಕೆ ಧುಮಿಕಿದರು.

ಹಲವಾರು ಬಾರಿ ಜೈಲವಾಸ ಅನುಭವಿಸಿದ ಗಾಂಧೀಜಿಯವರು ಅನೇಕ ಉಪವಾಸ ಸತ್ಯಾಗ್ರಗಳನ್ನು ಕೂಡ ಮಾಡಿದರು. ಅದರಲ್ಲಿ ಮಹಾರಾಷ್ಟ್ರದ ಪುಣೆ ಅಲ್ಲಿ ನಡೆದಿರುವಂತಹ 21 ದಿನಗಳ ಉಪವಾಸ ಮತ್ತು ಭಾರತ ಸ್ವತಂತ್ರ ನಂತರ 1947 ರಲ್ಲಿ ಭಾರತ ವಿಭಜನೆಯಾದ ನಂತರ ಕೋಮಗಲಭೆಗಳನ್ನು ನಿಯಂತ್ರಿಸಲು ಗಾಂಧೀಜಿ ಮತ್ತೆ ತಮ್ಮ ಸತ್ಯ ಮತ್ತು ಅಹಿಂಸೆ ಅಸ್ತ್ರಗಳನ್ನು ಹಿಡಿದು ಉಪವಾಸ ಮಾಡಿದರು.

ಆ ಕರಾಳ ದಿನಗಳಲ್ಲಿ ಅದೆಂತ ಧೈರ್ಯ ಬಾಪೂಜಿಯವರಾಗಿತ್ತೆಂದರೆ ನಂಬಿದ ಸಿದ್ಧಾಂತಗಳನ್ನು ಅಂತಹ ಕಠೋರ ವ್ಯಕ್ತಿಗಳು ಕೂಡ ಮನ್ನಣೆ ನೀಡುತ್ತಾರೆ ಎಂಬುದೇ ಆ ಕ್ಷಣಗಳಲ್ಲಿ ಸಾಕ್ಷಿ ಉಪವಾಸ ಸತ್ಯಾಗ್ರಹದಿಂದ ಕೋಮ ದಂಗೆಗಳನ್ನು ನಿಲ್ಲಿಸಿದ ಹೆಗ್ಗಳಿಕೆ ಮಹಾತ್ಮ ಗಾಂಧೀಜಿಯವರದಾಗಿತ್ತು. ಮಹಾತ್ಮ ಗಾಂಧೀಜಿಯವರನ್ನು 1948 ಜನವರಿ 30ರಂದು ನಾಥೂರಾಮ್ ಗೋಡ್ಸೆ ಗಾಂಧೀಜಿಯವರ ಎದೆಗೆ ಮೂರು ಗುಂಡುಗಳನ್ನು ಹಾರಿಸಿದ ಆದರೆ ಈ ಜಗತ್ತು ಆ ಮೂರು ಗುಂಡುಗಳನ್ನು ಮೂರು ಪದಕಗಳೆಂದು ಮಾರ್ಮಿಕವಾಗಿ ಹೇಳಿತು

ಹೇ ರಾಮ

Related News

ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ -ಜಮೀರ್ ಅಹ್ಮದ್ ಖಾನ್

ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್​ಗೆ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. 70ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಸಿದ್ದರಾಮಯ್ಯ, ಡಿಕೆ & ನಾನು ಟೀಂ...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು -ಎಂ.ಬಿ.ಪಾಟೀಲ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು. ಗ್ಯಾರಂಟಿಗೆ ವಿರೋಧ ಮಾಡಿದವರು ಗ್ಯಾರಂಟಿ ಘೋಷಣೆ ಮಾಡಿದರು ಎಂದು ವಿಜಯಪುರದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲುವ ವಿಶ್ವಾಸ ಇದೆ....

Latest News

- Advertisement -
- Advertisement -
- Advertisement -
- Advertisement -