ರಾಯಚೂರು: ಮಗನಿಗೆ ಈಜು ಕಲಿಸಲು ಹೋದ ತಂದೆ ನೀರು ಪಾಲಾಗಿರೋ ದಾರುಣ ಘಟನೆ ಸಿರವಾರ ತಾಲ್ಲೂಕಿನ ಅತ್ತನೂರು ಕ್ಯಾಂಪ್ನ ಬಳಿ ನಡೆದಿದೆ.
ಕೆ.ಲಿಂಗಣ್ಣ(38) ಮೃತ ದುರ್ದೈವಿ. ಮಗನಿಗೆ ಈಜು ಕಲಿಸಲು ಕೆರೆಗೆ ತೆರಳಿದ್ದರು. ಮೊದಲು ಮಗನಿಗೆ ಈಜು ಕಲಿಸಿ ಕಳುಹಿಸಿದ ಲಿಂಗಣ್ಣ, ನಂತರ ಈಜಲು ಕೆರೆಗೆ ಧುಮುಕಿದಾಗ ದುರ್ಘಟನೆ ನಡೆದಿದೆ.
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಸಂಬಂಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಲಾಗಿದೆ.