ವರದಿ : ರತ್ನಾಕರ್ ಗೌಂಡಿ
ಬೆಳಗಾವಿ: ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಬಂದ ಎಂಇಎಸ್ ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಬಂದಿದ್ದ ಮುಖಂಡರುಗಳಿಗೆ ವ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದೇ ಅವರನ್ನು ವಾಪಸ್ ಕಳ್ಸಿದ್ರು.
ಈ ವೇಳೆ ಅನುಮತಿ ನೀಡದಿದ್ದಾಗ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಲು ಆರಂಭಿಸಿದ್ದಾರೆ. ಈ ವೇಳೆ ಪೊಲೀಸರು ಪುಂಡರನ್ನು ವಶಕ್ಕೆ ಪಡೆದು ಕೊಂಡೊಯ್ದರು.
ಸಮಿತಿ ಮುಖಂಡರಾದ ಮಾಜಿ ಶಾಸಕ ಮನೋಹರ್ ಕಿಣಿಯಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಮರಾಠಿ ಜನರಿಗೆ ಕರ್ನಾಟಕ ಸರ್ಕಾರ ಅನ್ಯಾಯ ಮಾಡುತ್ತಿರುವುದು ಇದೇನು ಹೊಸದಲ್ಲ.
ಆದರೆ ನಾವು ಸರಕಾರ ಕಡೆ ಕೇಳುವುದು ಒಂದೇ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರಾಠಿ ಭಾಷೆ ಕಲಿಯು ಮರಾಠಿ ಭಾಷಿಕರಗಳಿಗೆ ಸರ್ಕಾರಿ ಕಾಗದ ಪತ್ರಗಳು ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪೂರೈಸಬೇಕೆಂದು ನಮ್ಮದು ಬಹುದಿನಗಳ ಬೇಡಿಕೆವಾಗಿದೆ.
ಗಡಿ ವಿಷಯ ನ್ಯಾಯಾಲಯದಲ್ಲಿ ಇರೋದ್ರಿಂದ ಮಹಾರಾಷ್ಟ್ರದ ಮಂತ್ರಿಗಳು ಯಾವ ಕಾರಣಕ್ಕೆ ಬರುತ್ತಾ ಇದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಹಲವಾರು ಬಾರಿ ಸರ್ಕಾರ ಜೊತೆ ಮಾತನಾಡಲು ಪ್ರಯತ್ನಿಸಿದರು ಕೂಡ ಯಾವುದೇ ಫಲ ಸಿಗದೇ ಕಾರಣಕ್ಕೆ ನಾವು ಮಹಾರಾಷ್ಟ್ರದ ಸಚಿವರು ಮತ್ತು ಶಾಸಕರು ಜೊತೆ ಮಾತನಾಡಲು ಆಸಕ್ತಿ ಹೊಂದಿದ್ದೇವೆ ಎಂದರು.ಬಳಿಕ 50 ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.