ಬೆಳಗಾವಿ: ಸುವರ್ಣಸೌಧದಲ್ಲಿ ವಿಧಾನ ಮಂಡಲ ಅಧಿವೇಶನ ಆರಂಭಗೊಂಡ ನಡುವೆಯೇ ಹೊರಗಡೆ ಹಲವು ಹೋರಾಟಗಳ ಸರಣಿಯೇ ಆರಂಭಗೊಂಡಿದೆ.
ಪ್ರತಿಭಟನೆ ಮಾಡುವವರಿಗಾಗಿಯೇ ಒಂದು ಶಾಮಿಯಾನಾ ಹಾಕಲಾಗಿದ್ದು, ಗಾಳಿಯ ರಭಸಕ್ಕೆ ಅದು ಕುಸಿದು ಬಿದ್ದು ಭಾರಿ ಅವಾಂತರವೇ ಸಂಭವಿಸಿತು. ಆದರೆ, ಯಾವುದೇ ಅಪಾಯವಾಗಿಲ್ಲ.
ಕೊಂಡಸಕೊಪ್ಪ ಎಂಬಲ್ಲಿ ಪ್ರತಿಭಟನೆಗಾಗಿ ಶಾಮಿಯಾನ ಹಾಕಲಾಗಿದ್ದು, ಅಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರ ಸಂಘದಿಂದ ಪ್ರತಿಭಟನೆ ನಡೆಯುತ್ತಿತ್ತು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿದೆಡೆಗಳಿಂದ ಆಗಮಿಸಿರುವ ಮೂರು ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯತ್ ನೌಕರರು ಧರಣಿಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಗ್ರಾಮ ಪಂಚಾಯತ್ ನೌಕರರ ಧರಣಿ ವೇಳೆ , ಗಾಳಿಯ ರಭಸಕ್ಕೆ ಟೆಂಟ್ ಕುಸಿದುಬಿದ್ದಿದೆ. ಕೂಡಲೇ ಎಚ್ಚೆತ್ತುಕೊಂಡ ಧರಣಿ ನಿರತರು ಹೊರಗೆ ಓಡಿ ಬಂದಿದ್ದರಿಂದ ಅನಾಹುತ ತಪ್ಪಿದೆ.