ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ದಿಲ್ಲಿ ಹೈಕಮಾಂಡ್ ಭೇಟಿಯ ಹಿನ್ನೆಲೆಯಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಸದ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ಕುರಿತು ಮಾತುಕತೆ ನಡೆಸಿದ್ದಾರೆ.

ಈ ಬೆಳವಣಿಗೆಯಿಂದ ಬೆಳಗಾವಿ ರಾಜಕಾರಣದಲ್ಲಿ ಕೆಲವೊಂದು ಬದಲಾವಣೆಗಳು ಆಗುವುದು ನಿಶ್ಚಿತ ಬೆಳಗಾವಿ ಸೂಪರ್ ಪವರ್ ಆಗಿರುವ ಸಚಿವ ಸತೀಶ್ ಜಾರಕಿಹೊಳಿ ರಾಜಕೀಯ ಚದುರಂಗದ ಆಟದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ತಮ್ಮ ಆಪ್ತ ವಲಯದಲ್ಲಿ ಇರುವ ನಾಯಕರಗಳಿಗೆ ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ನೀಡಿ ಪಕ್ಷದಲ್ಲಿ ತನ್ನ ಬಲ ಮತ್ತು ಹಿಡಿತವನ್ನು ಸಾಧಿಸಲು ಮುಂದಾಗಿದ್ದಾರೆ. ಅದರ ಮೊದಲನೇ ಹೆಜ್ಜೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಖಾನಾಪುರ್ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ.

ಇದರಿಂದಾಗಿ ಒಂದೇ ಕಲ್ಲಿಂದ ಎರಡು ಹಣ್ಣುಗಳನ್ನು ಬೀಳಿಸಲು ಸಚಿವರು ಯೋಜನೆಯ ರೂಪಿಸಿದಂತಾಗಿದೆ ಎಂದು ಸ್ಪಷ್ಟವಾಗಿದೆ ಮುಂದೆ ಬರುವ ದಿನಗಳಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಲಿದೆ.
ವರದಿ: ರತ್ನಾಕರ ಗೌಂಡಿ, ಬೆಳಗಾವಿ