ಬೆಳಗಾವಿ: ಶಾಲಾ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಬಸ್ ಬ್ರೇಕ್ ಫೇಲ್ ಆಗಿ, ಘಾಟ್ ನ ಕಂದಕಕ್ಕೆ ಉರುಳಿ ಬಿಳೋ ಮುನ್ನವೇ ಗುಡ್ಡಕ್ಕೆ ಬಸ್ ಒರಗಿಸಿ ಚಾಲಕ ನಿಲ್ಲಿಸಿ ಸಮಯ ಪ್ರಜ್ಞೆ ಮೆರೆದಿದ್ದಾನೆ. ಇದರಿಂದ ಭಾರೀ ದುರಂತವೊಂದು ತಪ್ಪಿದೆ.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿನ ಖಾಸಗೀ ಶಾಲೆಯೊಂದರ ಮಕ್ಕಳನ್ನು, ಶೈಕ್ಷಣಿಕ ಪ್ರವಾಸಕ್ಕೆ ಮಹಾರಾಷ್ಟಕ್ಕೆ ಕರೆದೊಯ್ಯಲಾಗಿತ್ತು. ಮಹಾರಾಷ್ಟ್ರದ ಸತಾರಾ ರಸ್ತೆಯ ಘಾಟ್ ನಲ್ಲಿ ಬಸ್ ಬ್ರೇಕ್ ಫೇಲ್ ಆಗಿದೆ.
ಸಾರಿಗೆ ಬಸ್ ಚಾಲಕ ಕೂಡಲೇ ಬ್ರೇಕ್ ಫೇಲ್ ಆಗಿದ್ದಂತ ಬಸ್ ಅನ್ನು ಕಂದಕಕ್ಕೆ ಉರುಳಿ ಬಿಳೋ ಮುನ್ನವೇ ಸಮಯ ಪ್ರಜ್ಞೆ ಮೆರೆದು, ರಸ್ತೆಯ ಪಕ್ಕದ ಗುಡ್ಡಕ್ಕೆ ತಾಗಿ ನಿಲ್ಲಿಸಿದ್ದಾನೆ. ಇದರಿಂದ ಬಸ್ಸಿನಲ್ಲಿದ್ದಂತ 50 ಶಾಲಾ ಮಕ್ಕಳು ಸೇರಿದಂತೆ ನಾಲ್ವರು ಶಿಕ್ಷಕರು ಭಾರೀ ದುರಂತದಿಂದ ಪಾರಾದಂತೆ ಆಗಿದೆ. ಈ ಬಳಿಕ ಶಾಲಾ ಮಕ್ಕಳನ್ನು ಬೇರೊಂದು ಬಸ್ ಮೂಲಕ ಕಳುಹಿಸಿದ್ದಾರೆ ಎನ್ನಲಾಗಿದೆ.