Ad imageAd image

ಸಮಾಜದ ಉನ್ನತಿ ಶಿಕ್ಷಣದ ಮೂಲ ಮಂತ್ರ : ಸುಳಿಭಾವಿ

ratnakar
ಸಮಾಜದ ಉನ್ನತಿ ಶಿಕ್ಷಣದ ಮೂಲ ಮಂತ್ರ : ಸುಳಿಭಾವಿ
WhatsApp Group Join Now
Telegram Group Join Now

ಬಾಗಲಕೋಟೆ: ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಯನ್ನು ಬಯಸುವುದರ ಮೂಲಕ ಸಮಾಜದ ಉನ್ನತಿಗೆ ಕಾರಣಿಭೂತವಾಗಿದೆ ಎಂದು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಸ್ಥೆಯ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಧ್ಯಕ್ಷರಾದ ಗುರುಬಸವ ಸುಳಿಭಾವಿ ಅಭಿಪ್ರಾಯ ಪಟ್ಟರು.

ಅವರು ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಬಸವೇಶ್ವರ ವಿದ್ಯಾವರ್ಧಕ ಸಂಘವು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ತಮ್ಮ ಛಾಪನ್ನು ಮೂಡಿಸುವುದಲ್ಲದೆ ಸಮಾಜದ ಆಧಾರ ಸ್ತಂಭಗಳಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಇದು ಸಂಸ್ಥೆಗೆ ಅದರ ಕಾರ್ಯ ದಕ್ಷತೆಗೆ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರ ದೂರದೃಷ್ಟಿಯೇ ಕಾರಣ. ಸುಮಾರು 170ಕ್ಕೂ ಹೆಚ್ಚಿನ ಅಂಗ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಶಿಕ್ಷಣದ ಮೂಲಕ ಸಮಾಜದ ಉನ್ನತಿಯನ್ನು ನಾವೆಲ್ಲರೂ ಬಯಸುತ್ತಿದ್ದೇವೆ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ವಿಭಾಗಿಯ ಸಾರಿಗೆ ಅಧಿಕಾರಿ ಪಡೆಯಪ್ಪ ಮೇತ್ರಿ ಅವರು ಮಾತನಾಡಿ ನನ್ನಲ್ಲಿ ಪ್ರಾಮಾಣಿಕತೆ, ದಕ್ಷತೆ ಗುಣಗಳನ್ನು ಕಾಲೇಜು ಹಂತದಲ್ಲಿ ರೂಪಿಸಿದ ಪ್ರಾಧ್ಯಾಪಕ ಬಳಗಕ್ಕೆ ಚಿರಋಣಿ ಎಂದರು.

ಅದೇ ಸಂದರ್ಭದಲ್ಲಿ ಮತ್ತೋರ್ವ ವಿದ್ಯಾರ್ಥಿ ಜವಾಹರ್ ನವೋದಯ ವಿದ್ಯಾಲಯ ಮುದುಗಲ್ ಪ್ರಾಧ್ಯಾಪಕರಾದ ರಮೇಶ್ ಪಟ್ಟಣ ಅವರು ಮಾತನಾಡಿ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಲಿತಿರುವುದು ನನ್ನ ಸೌಭಾಗ್ಯ. ಇಲ್ಲಿ ಶಿಕ್ಷಣ ಅಷ್ಟೇ ಕಲಿಸುವುದಲ್ಲದೇ ಮಾನವೀಯ ಮೌಲ್ಯಗಳನ್ನು, ಸಚ್ಚಾರಿತ್ರ್ಯ ನಡೆಯನ್ನು ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಮೂಲಕ ಪ್ರಾಧ್ಯಾಪಕ ಬಳಗ ಕಲಿಸಿರುವುದರಿಂದ ನಮ್ಮ ಬದುಕು ಸುಂದರವಾಗಿ ರೂಪಗೊಳ್ಳಲು ಕಾರಣವಾಗಿದ್ದಾರೆ. ನಾವೆಲ್ಲರೂ ಕಾಲೇಜಿನ ಅಭಿವೃದ್ಧಿಗೆ ಕೈಜೋಡಿಸಲು ಸಿದ್ಧರಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸಿ.ಎಸ್ ಪಾಟೀಲ್, ಎಸ್.ಎಚ್. ವಟ ವಟಿ, ಬಿ.ಎಸ್.ಕಿರಸೂರ, ರಾಚಪ್ಪ ಸರದಗಿ, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು ಬೇವಿನಹಳ್ಳಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಫಲಿತಾಂಶ ತೆಗೆದುಕೊಂಡ ವಿದ್ಯಾರ್ಥಿಗಳನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಪರವಾಗಿ ಗೌರವಿಸಿ ಸತ್ಕರಿಸಲಾಯಿತು.

WhatsApp Group Join Now
Telegram Group Join Now
Share This Article