ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ-ವಿಜಯಪೂರ ರಸ್ತೆಗೆ ಹೊಂದಿಕೊಂಡ ಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಇರುವ ಇತಿಹಾಸ ಪ್ರಸಿದ್ದ ತ್ರಿಲೋಕೇಶ್ವರ ದೇವಾಲಯವನ್ನು ರಸ್ತೆ ಅಗಲೀಕರಣದ ಹೆಸರಲ್ಲಿ ತೆರವುಗೊಳಿಸುತ್ತಿರುವುದಕ್ಕೆ ಅಥಣಿಯ ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ.
ಸ್ಥಳೀಯವಾಗಿ ಸುಮಾರು 100 ವರ್ಷಕ್ಕಿಂತಲೂ ಅಧಿಕ ಹಳೆಯದಾದ ಈ ತ್ರಿಲೋಕೇಶ್ವರ ಹಿಂದೂ ದೇಗುಲವನ್ನು ರಸ್ತೆ ಅಗಲೀಕರಣ ನೆಪದಲ್ಲಿ ತೆರವುಗೊಳಿಸುತ್ತೊರುವುದು ತರವಲ್ಲ, ಈ ದೇವಾಲಯ ಇತಿಹಾಸ ಪ್ರಸಿದ್ದವಾಗಿದೆ. ನಿತ್ಯವೂ ಪೂಜೆಗೆ ಒಳಪಡುತ್ತಿದ್ದ ದೇವಾಲಯವನ್ನು ತೆರವುಗೊಳಿಸುತ್ತಿರುವುದು ಖಂಡನೀಯ ಕೂಡಲೇ ಅದನ್ನು ಕೈ ಬಿಡಬೇಕು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಅನಿಸಿಕೆಯಾಗಿದೆ.