ವರದಿ : ರತ್ನಾಕರ ಗೌಂಡಿ
ನವದೆಹಲಿ : ವಿಶ್ವದ ಅತಿ ದೊಡ್ಡ ಚುನಾವಣೆ ವ್ಯವಸ್ಥೆಯನ್ನು ಹೊಂದಿರುವ ಭಾರತದ ಚುನಾವಣಾ ಆಯೋಗ, ಈ ಆಯೋಗದ ಮೇಲೆ ಕೇಂದ್ರ ಸರ್ಕಾರದ ಹಸ್ತಕ್ಷೇಪದ ಕುರಿತು ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದೆ.
ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪಂಚ ಪೀಠವು ಚುನಾವಣಾ ಆಯೋಗದ ಸದಸ್ಯರ ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ವೇಳೆ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದೆ.
ದೇಶದ 10ನೇ ಚುನಾವಣೆ ಆಯೋಗದ ಆಯುಕ್ತರಾಗಿ ಸೇವೆ ಸಲ್ಲಿಸಿದ ಟಿ.ಎನ್. ಶೇಷನ್ ಅವರು, ಚುನಾವಣಾ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ ಮಾಡಿದ್ದರು.
ಇವರ ಬಳಿಕ ಯಾರೊಬ್ಬ ಸಿಐಎಸ್ ಕೂಡ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಯಾರು ಒಬ್ಬರು ಪೂರ್ಣಾವಧಿ ಅಧಿಕಾರ ನಡೆಸುತ್ತಿಲ್ಲ, ಅವಧಿಗೂ ಮುನ್ನವೇ ಆಯುಕ್ತರನ್ನು ಕೇಂದ್ರ ಸರ್ಕಾರ ವಜಾಗೊಳಿಸುತ್ತೀವೆ. ಹೀಗಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಇಂದಿನ ಬಿಜೆಪಿ ಸರ್ಕಾರದ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಸರಕಾರ ತನಗೆ ಬೇಕಾದವರನ್ನೇ ಆಯೋಗದ ಆಯುಕ್ತನ್ನಾಗಿ ನೇಮಕ ಮಾಡಿಕೊಳ್ಳುತ್ತೀವೆ ಎನ್ನುವುದು ಸುಪ್ರೀಂ ಕೋರ್ಟ್ ಗಂಭೀರ ಆರೋಪ ಮಾಡಿದೆ.
ಇತ್ತೀಚೆಗಷ್ಟೆ ಸೇವೆಯಿಂದ ಸ್ವಯಂ ನಿವೃತ್ತರಾದ ಪಂಜಾಬ್ ಕೇಡರ್‌ನ ಐಎಎಸ್ ಅಧಿಕಾರಿ ಅರುಣ್ ಗೋಯಲ್ ಅವರನ್ನು ಒಂದು ದಿನವೂ ತಡ ಮಾಡದೆ ಕೇಂದ್ರ ಸರಕಾರ ಚುನಾವಣಾ ಆಯುಕ್ತರನ್ನಾಗಿ ನೇಮಿಸಿತ್ತು. 2004 ರಿಂದ ಕೇಂದ್ರ ಸರ್ಕಾರದ ಈ ನಡೆ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ವಿಆರ್‌ಎಸ್ ಪಡೆದ ಮರುದಿನವೇ ಆಯುಕ್ತರಾದ ಗೋಯಲ್ ನೇಮಕಾತಿ ಸಂಬಂಧದ ಕಡತಗಳನ್ನು ವರ್ಗಾಯಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ಕೇಳಿದೆ.
ಇನ್ನು ಟಿ.ಎನ್. ಶೇಷನ್‌ರನ್ನು ಸುಪ್ರೀಂಕೋರ್ಟ್ ಸ್ಮರಿಸಿದ್ದು ವಿಶೇಷ, ಸಿಇಸಿ ಹುದ್ದೆಯ ಪರಮಾಧಿಕಾರವು ದೇಶಕ್ಕೆ ಮನವರಿಕೆ ಆಗಿದ್ದೇ ಟಿ.ಎನ್. ಶೇಷನ್ ರ ಕಾಲಾವಧಿಯಲ್ಲಿ 10ನೇ ಚುನಾವಣಾ ಆಯುಕ್ತರಾಗಿ ಬಂದು ಚುನಾವಣಾ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ತಂದರು. ಪಕ್ಷಗಳ ಅತೃಪ್ತಿಯ ನಡುವೆಯೂ ಮಾದರಿ ನೀತಿ ಸಂಹಿತೆಯನ್ನು ಜಾರಿ ಮಾಡಿದರು.
ಚುನಾವಣೆಯಲ್ಲಿ ಅಕ್ರಮ ಎಸಗುತ್ತಿದ್ದ ಸ್ಥಳೀಯ ಗೂಂಡಾಗಳನ್ನು ಮಟ್ಟಹಾಕಲು, ಮತಪೆಟ್ಟಿಗೆ ಹೈಜಾಕ್ ತಪ್ಪಿಸಲು ಕೇಂದ್ರ ಪೊಲೀಸ್ ಪಡೆಯನ್ನು ಮೊದಲ ಬಾರಿಗೆ ಬಳಸಿದರು.
ಚುನಾವಣೆಯಲ್ಲಿ ಇವರ ಇಂಥ ಗಮನಾರ್ಹ ಸುಧಾರಣೆ ಪರಿಗಣಿಸಿ 1996ರಲ್ಲಿ ಇವರಿಗೆ ರೇಮನ್ ಮ್ಯಾಗ ಗೌರವ ಒಲಿದುಬಂತು. ಇದಕ್ಕೆ ಇಂದಿನ ವ್ಯವಸ್ಥೆ ವಿರುದ್ಧ ಸುಪ್ರೀಂ ಕೋರ್ಟ್, ಶೇಷನ್ ಕಟ್ಟಿದ ಈ ಚುನಾವಣಾ ವ್ಯವಸ್ಥೆಯನ್ನು ಹಾಳುಗೆಡವದಿರಿ ಎಂದು ಕಳವಳ ವ್ಯಕ್ತಪಡಿಸಿದೆ.