Ad imageAd image

ಪದವಿಪೂರ್ವ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ratnakar
ಪದವಿಪೂರ್ವ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
WhatsApp Group Join Now
Telegram Group Join Now

ಬಿವಿವಿ ಸಂಘದ ಬಸವೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಮಖಂಡಿಯ ಬಿಎಲ್.ಡಿಇ ಪದವಿಪೂರ್ವ ಕಲಾ ಮಹಾವಿದ್ಯಾಲಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪದವಿಪೂರ್ವ ಕ್ರೀಡಾಕೂಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


100ಮೀ. ಮತ್ತು 200ಮೀ ಹಾಗೂ ಉದ್ದ ಜಿಗಿತದಲ್ಲಿ ವಿಶಾಲ ಲಮಾಣಿ ಪ್ರಥಮ ಸ್ಥಾನ ಪಡೆದಿದ್ದು, 110ಮೀ. ಹರ್ಡಲ್ಸ್ನಲ್ಲಿ ಆಕಾಶ ಮಾದರ, 100 ಮೀ. ರಿಲೇ ಸ್ಪರ್ಧೆಯಲ್ಲಿ ವಿಶಾಲ ಲಮಾಣಿ, ಆಕಾಶ ಮಾದರ, ಮಲ್ಲಿಕಾರ್ಜುನ ಸೊನ್ನದ, ಭರಮಪ್ಪಾ ತುಳಸಿಗೇರಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಗಿದ್ದಾರೆ.
400 ಮೀ. ರಿಲೇ ಸ್ಪರ್ಧೆಯಲ್ಲಿ ಆಕಾಶ ಮಾದರ, ಪ್ರವೀಣ ಹಿರಾಳ, ವಿಶಾಲ ಲಮಾಣಿ ಹಾಗೂ ಮಲ್ಲಿಕಾರ್ಜುನ ಸೊನ್ನದ ದ್ವಿತೀಯ ಸ್ಥಾನ ಪಡೆದಿದ್ದು, ಯೋಗದಲ್ಲಿ ಕಾಶಿನಾಥ ಹಡಪದ ದ್ವಿತೀಯ ಸ್ಥಾನ, ಮಹಿಳೆಯರ ಹಾಗೂ ಪುರುಷರ ಹಾಕಿ ತಂಡಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ.

ಒಟ್ಟು ಮಹಾವಿದ್ಯಾಲಯದಿಂದ 38 ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ವಿದ್ಯಾರ್ಥಿಗಳಿಗೆ ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಬಾವಿ, ಪಿಯುಸಿ ವಿಭಾಗದ ಸಂಯೋಜಕರಾದ ಆರ್.ಎಮ್ ಬೆಣ್ಣೂರ, ಪ್ರಚಾರ್ಯರಾದ ಎಸ್.ಆರ್ ಮುಗನೂರಮಠ, ದೈಹಿಕ ಶಿಕ್ಷಣ ನಿರ್ದೇಶಕರಾದ ಮಂಜುನಾಥ ದೇವನಾಳ ಅಭಿನಂದಿಸಿದ್ದಾರೆ.

WhatsApp Group Join Now
Telegram Group Join Now
Share This Article