ಗಜಪತಿ,ಕುಕಡೊಳ್ಳಿ ಬಡಸ್ kh ಬೆಂಡಿಗೇರಿ ಸೇರಿದಂತೆ ವಿವಿದ ಗ್ರಾಮಗಳ ಶಾಲೆ, ಕಾಲೇಜುಗಳಿಗೆ ಹೋಗುವ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾ ಪರಿಸ್ಥತಿ ವಿಧ್ಯಾರ್ಥಿಗಳಿಗೆ ಸ್ಥಳಿಯರಿಗೆ ಎದುರಾಗಿದೆ.
ಬಸ್ ಬಾರದೆ ಹೋದರೆ ಶಾಲೆ, ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಬೇಕಾಗಿದೆ.
ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಂದ ಮನೆಗೆ ತೆರಳಬೇಕಾದರೂ ಬಸ್‌ಗಳಿಲ್ಲದೆ, ಪರ್ಯಾಯ ಮಾರ್ಗವಿಲ್ಲದೆ ವಿಧ್ಯಾರ್ಥಿಗಳು ಐದಾರು ಕಿಲೋ ಮೀಟರ್ ನಡೆದುಕೊಂಡು ಹೋಗಿ ದಿನನಿತ್ಯ ಕಷ್ಟ ಪಡುತ್ತಿದ್ದಾರೆ.
ಈ ಬಗ್ಗೆ , ಸ್ಥಳೀಯರು ,ಹಾಗೂ ವಿಧ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಘಟಕದ ಬೆಳಗಾವಿ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಗ್ರಾಮೀಣ ಭಾಗಗಳಿಗೆ ಒಂದೊಂದೆ ಬಸ್‌ಗಳು ಸಂಚರಿಸುತ್ತಿದ್ದು ವಿದ್ಯಾರ್ಥಿಗಳಿಗೆ ಆ ಬಸ್ ತಪ್ಪಿದರೆ ಅಂದು ತರಗತಿಗೇ ಗೈರಾಗಬೇಕಿದೆ. ಕೆಲವು ಕಡೆಗಳಲ್ಲಿ ಪರ್ಯಾಯ ವಾಹನಗಳು ಬಾರದೆ ಗ್ರಾಮದಿಂದ ರಸ್ತೆಯವರೆಗೂ ನಡೆದುಕೊಂಡು ಬಂದು ಬಸ್ ಹಿಡಿಯಬೇಕಾದಂತ ಪರಿಸ್ಥಿತಿ ಗ್ರಾಮೀಣ ಬಾಗದಲ್ಲಿದೆ.