ಇಂದು ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರುದ್ರಣ್ಣ ಯಡವಣ್ಣನವರ್ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಾಯಿತು. ಕುಟುಂಬದ ಸದಸ್ಯರ ಪ್ರಕಾರ ಮೃತ ವ್ಯಕ್ತಿಯ ದಾಖಲೆಗಳಲ್ಲಿ ತಪ್ಪಿತಸ್ಥರ ಹೆಸರುಗಳನ್ನು ನಮೂದಿಸಿದ್ದಾರೆ ಹಾಗೂ ತಪ್ಪಿತಸ್ಥರು ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಲಭ್ಯವಿದ್ದರೂ, ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ ತನಿಖೆಕೈಗೊಳ್ಳಲು ವಿಳಂಬ ಮಾಡುತ್ತಿದೆ, ಪ್ರಕರಣ ಮುಚ್ಚುಹಾಕಲು ಪ್ರಯತ್ನಿಸುದೆ ಎಂದರು.
ಸದ್ಯದ ಆತ್ಮಹತ್ಯೆ ಭಾಗ್ಯ ನೀಡುತ್ತಿರುವ ನರಹಂತಕ ಕಾಂಗ್ರೇಸ್ ಸರ್ಕಾರಕ್ಕೆ ಮತ್ತೊಬ್ಬ ಸರ್ಕಾರಿ ನೌಕರ ಬಲಿಯಾಗಿದ್ದು, ತನಿಖೆ ವಿಳಂಬದ ಹಿಂದೆ ಯಾರು ಯಾರು ಒತ್ತಡ ಹಾಕುತ್ತಿದ್ದಾರೆ, ಅವರ ಮೇಲೆಯು ತನಿಖೆ ನಡೆಸಬೇಕು ಇಲ್ಲವಾದರೆ ಬಿಜೆಪಿ ಇನ್ಮುಂದೆ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಅನಿಲ ಬೆನಕೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಸವಿತಾ ಕಾಂಬಳೆ, ಬಿಜೆಪಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಗೀತಾ ಸುತಾರ್, ಹಿರಿಯ ಬಿಜೆಪಿ ಮುಖಂಡರು ಹಾಗೂ ನ್ಯಾಯವಾದಿಗಳಾದ ಎಂ ಬಿ ಜಿರಳಿ ಉಪಸ್ಥಿತರಿದ್ದರು.