ಬಳ್ಳಾರಿ: ನಾವು ಮೀಸಲಾತಿ ಹೆಚ್ಚಳ ಮಾಡಿದ್ದೀವಿ, ತಾಕತ್ತಿದ್ರೆ ನಮ್ಮನ್ನು ತಡೀರಿ ಎಂದು ಸಚಿವ ಶ್ರೀರಾಮುಲು ಸವಾಲ್ ಹಾಕಿದ್ದಾರೆ.
ಬಳ್ಳಾರಿಯಲ್ಲಿ ನಡೆದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಮಗೆ ಯಾವ ರೀತಿ ನ್ಯಾಯ ಕೊಟ್ಟಿದ್ದಾರೆ ಎಂಬುದು ಇಲ್ಲಿ ನೆರೆದಿರುವ ಜನರನ್ನು ನೋಡಿದ್ರೆ ಗೊತ್ತಾಗುತ್ತದೆ ಎಂದು ಹೇಳಿದರು.
ಇದೊಂದು ಸಮಾವೇಶ ಮಾತ್ರವಲ್ಲ, ಸಾಧನ ಸಮಾವೇಶ, ಮುಖ್ಯಮಂತ್ರಿ ಬೊಮ್ಮಾಯಿಗೆ ಜೋಡು ಗುಂಡಿಗೆ ಇದೆ, ಮುಂದಿನ ಚುನಾವಣೆಯಿಂದ ಕಾಂಗ್ರೆಸ್ ಶಿರಚ್ಛೇದನವಾಗಲಿದೆ ಎಂದು ಸವಾಲ್ ಹಾಕಿದ್ದಾರೆ.