Ad imageAd image

ಸಂಪದ್ಭರಿತ ರಾಷ್ಟ್ರ ನಿರ್ಮಾಣಕ್ಕೆ ಕಂಕಣಬದ್ಧರಾಗೋನ: ಎಸ್. ಆರ್ ಮುಗನೂರಮಠ

ratnakar
ಸಂಪದ್ಭರಿತ ರಾಷ್ಟ್ರ ನಿರ್ಮಾಣಕ್ಕೆ ಕಂಕಣಬದ್ಧರಾಗೋನ: ಎಸ್. ಆರ್ ಮುಗನೂರಮಠ
WhatsApp Group Join Now
Telegram Group Join Now

ಬಾಗಲಕೋಟೆ: ಸ್ವಾತಂತ್ರ ಪಡೆದ 78 ವರ್ಷಗಳ ದೀರ್ಘಾವಧಿಯಲ್ಲಿ ದೇಶವು ಅನೇಕ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮೂಲಕ ಇತಿಹಾಸ ನಿರ್ಮಿಸಿದ್ದು ದೇಶಕ್ಕಾಗಿ ಜೀವನವನ್ನೇ ಬಲಿದಾನಗೈದ ಹೋರಾಟಗಾರರನ್ನು ಧನ್ಯತೆಯಿಂದ ಸ್ಮರಿಸಿಕೊಳ್ಳಬೇಕು. ಸಂವಿಧಾನದ ದ್ಯೇಯವನ್ನು ಗಮನದಲ್ಲಿರಿಸಿಕೊಂಡು ಸಂಪದ್ಭರಿತ ರಾಷ್ಟ್ರ ನಿರ್ಮಾಣಕ್ಕೆ ಕಂಕಣಬದ್ಧರಾಗಬೇಕೆಂದು ಪ್ರಾಚಾರ್ಯರಾದ ಎಸ್. ಆರ್ ಮುಗನೂರಮಠ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ 78ನೇ ಸ್ವತಂತ್ರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಧ್ವಜಾರೋಹಣವನ್ನು ನಿರ್ವಹಿಸಿ ಅವರು ಮಾತನಾಡಿದರು. ದೇಶಕ್ಕಾಗಿ ದೇಶ ಮತ್ತು ದೈವ ನಮ್ಮದೆಂಬ ಭಾವನೆ ಬೆಳಸಿಕೊಂಡರೆ ನಂದನವನ ಸಾಮ್ರಾಜ್ಯ ಕಟ್ಟಲು ಸಾಧ್ಯ. ಇತಿಹಾಸದ ಪುಟಗಳಲ್ಲಿ ದೇಶವು ತನ್ನದೆಯಾದ ಛಾಪು ಮೂಡಿಸಿದ್ದು ಕೃಷಿ, ತಂತ್ರಜ್ಞಾನ, ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಸ್ಮರಣೀಯ ಎಂದರು.

ಐಕ್ಯತೆ ಮತ್ತು ಒಗ್ಗಟ್ಟಿನ ಪ್ರಾಮುಖ್ಯತೆಯನ್ನು ಅರಿತು ನಾವೆಲ್ಲರೂ ಒಂದೇ ಎಂಬ ಐಕ್ಯತೆಯ ದಿವ್ಯ ಸಂಕಲ್ಪದೊಂದಿಗೆ ದೇಶರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ಯುವಕರೇ ಆಸ್ತಿಯಾಗಿರುವ ನಮ್ಮ ದೇಶದಲ್ಲಿ ಅವರ ಕೌಶಲ್ಯ, ಜ್ಞಾನ, ದೈಹಿಕ ಸಾಮರ್ಥ್ಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸೋಣ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಧ್ವನಿ ಮೊಳಗಿ ಪ್ರತಿಯೊಬ್ಬ ಪ್ರಜೆಯ ಧ್ವನಿಯೂ ಸಿಂಹಧ್ವನಿಯಾಗುವಂತೆ ಕೆಲಸ ಮಾಡೋನ ಎಂದರು.

ಎನ್.ಸಿ.ಸಿ ಘಟಕದಲ್ಲಿ ಸಾಧನೆಗೈದ ಕ್ರೆಡಿಟ್ಸ್ಗಳಿಗೆ ಪ್ರಶಸ್ತಿ ಮತ್ತು ರ್ಯಾಂಕ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಾದ ಡಾ. ಬಿ.ಆರ್ ಪಾಟೀಲ್, ಲೆಪ್ಟಿನೆಂಟ್ ಮಂಜುನಾಥ ದೇವನಾಳ ಸೇರಿದಂತೆ ವಿವಿಧ ವಿಭಾಗಗಳ ಪ್ರಾದ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

 

WhatsApp Group Join Now
Telegram Group Join Now
Share This Article