Ad imageAd image

ದೀಪಾವಳಿ ಹಬ್ಬ: ಹುಬ್ಬಳ್ಳಿ-ಮಂಗಳೂರು ನಡುವೆ ವಿಶೇಷ ರೈಲು ಸಂಚಾರ

ratnakar
ದೀಪಾವಳಿ ಹಬ್ಬ: ಹುಬ್ಬಳ್ಳಿ-ಮಂಗಳೂರು ನಡುವೆ ವಿಶೇಷ ರೈಲು ಸಂಚಾರ
WhatsApp Group Join Now
Telegram Group Join Now

ಹುಬ್ಬಳ್ಳಿ: ದೀಪಾವಳಿ ಹಬ್ಬ ಮತ್ತು ವೀಕೆಂಡ್​ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಲಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯು ಎಸ್​ಎಸ್​ಎಸ್​ ಹುಬ್ಬಳ್ಳಿ-ಮಂಗಳೂರು ಜಂಕ್ಷನ್ (Hubballi-Mangaluru Specail Train)​ ನಡುವೆ ಒಂದು ಟ್ರಿಪ್​ ವಿಶೇಷ ಎಕ್ಸ್​​ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ನಿಭಾಯಿಸಲು ಮತ್ತು ಪ್ರಯಾಣಿಕರ ಮನವಿ ಮೇರೆಗೆ ನೈಋತ್ಯ ರೈಲ್ವೆಯು ಎಸ್​ಎಸ್​ಎಸ್ ಹುಬ್ಬಳ್ಳಿ – ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್​​ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ರೈಲು ಸಂಖ್ಯೆ 07311: ನವೆಂಬರ್​​ 2 ರಂದು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣದಿಂದ ಸಂಜೆ 4 ಗಂಟೆಗೆ ಹೊರಟು, ಮರುದಿನ ದಿನ ಬೆಳಗ್ಗೆ 11.25ಕ್ಕೆ ಮಂಗಳೂರು ಜಂಕ್ಷೆನ್ ತಲುಪಲಿದೆ.

ರೈಲು ಸಂಖ್ಯೆ 07312: ನವೆಂಬರ್ 3 ರಂದು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ಮರುದಿನ ನವೆಂಬರ್​ 4 ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ತಲುಪಲಿದೆ.

ಈ ರೈಲು ಎರಡೂ ದಿಕ್ಕುಗಳಲ್ಲಿ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಕುಣಿಗಲ್‌, ಚನ್ನರಾಯಪಟ್ಟಣೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟವಾಳ ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ಈ ರೈಲು 1 ಎಸಿ ಟು ಟೈಯರ್ ಬೋಗಿಗಳು, 2 ಫಸ್ಟ್​​ ಎಸಿ ಕಮ್​​ ತ್ರಿ ಟೈಯರ್ ಬೋಗಿಗಳು​​, 3 ಎಸಿ ತ್ರಿ ಟೈಯರ್ ಬೋಗಿಗಳು, 5 ಸ್ವೀಪರ್ ಕ್ಲಾಸ್ ಬೋಗಿಗಳು, 2 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್/ ಬ್ರೇಕ್ ವ್ಯಾನ್ ಬೋಗಿಗಳು ಸೇರಿದಂತೆ 15 ಬೋಗಿಗಳನ್ನು ಹೊಂದಿದೆ.

ಬೆಂಗಳೂರು-ಚೆನ್ನೈ ನಡುವೆ ವಿಶೇಷ ರೈಲು

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಚೆನ್ನೈ ಎಗ್ಮೋರ್​​ ನಿಲ್ದಾಣಗಳ ನಡುವೆ ಎರಡು ಟ್ರಿಪ್​​ ವಿಶೇಷ ಎಕ್ಸ್​​ಪ್ರೆಸ್​​ (06209/06210) ರೈಲು ಸಂಚಾರ

ರೈಲು ಸಂಖ್ಯೆ 06209 ಅಕ್ಟೋಬರ್ 30 ಮತ್ತು ನವೆಂಬರ್ 3 ರಂದು ಬೆಳಿಗ್ಗೆ 8:05ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು, ಅದೇ ದಿನ ಮಧ್ಯಾಹ್ನ 2:30ಕ್ಕೆ ಚೆನ್ನ ಎನ್ನೋರ್ ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ 06210 ಚಿನ್ನೆ ಎಗೋರ್ ನಿಲ್ದಾಣದಿಂದ ಅಕ್ಟೋಬರ್ 30 ಮತ್ತು ನವೆಂಬರ್ 3 ರಂದು ಮಧ್ಯಾಹ್ನ 3:55ಕ್ಕೆ ಹೊರಟು, ಅದೇ ದಿನ ರಾತ್ರಿ 10:50ಕ್ಕೆ ಕೆಎಸ್‌ಆ‌ರ್ ಬೆಂಗಳೂರು ತಲುಪಲಿದೆ.

WhatsApp Group Join Now
Telegram Group Join Now
Share This Article