Ad imageAd image

ದಸರಾ ಹಬ್ಬದ ನಿಮಿತ್ತ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು

ratnakar
ದಸರಾ ಹಬ್ಬದ ನಿಮಿತ್ತ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು
WhatsApp Group Join Now
Telegram Group Join Now

ಬೆಳಗಾವಿ: ದಸರಾ ಹಬ್ಬದಲ್ಲಿ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಲಯ ಬೆಂಗಳೂರಿನ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು ಓಡಿಸಲಿದೆ. ಯಾವ್ಯಾವ ದಿನಾಂಕದಂದು ವಿಶೇಷ ರೈಲು ಸಂಚರಲಿಸಲಿದೆ? ರೈಲು ಸಮಯ ಇಲ್ಲಿದೆ.

  • ರೈಲು ಸಂಖ್ಯೆ 06507 ಯಶವಂತಪುರ – ಬೆಳಗಾವಿ ವಿಶೇಷ ರೈಲು ಅಕ್ಟೋಬರ್​ 12 ರಂದು ಸಂಜೆ 6:15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ನಸುಕಿನ ಜಾವ 5 ಗಂಟೆಗೆ ಬೆಳಗಾವಿ ತಲುಪಲಿದೆ.
  • ರೈಲು ಸಂಖ್ಯೆ 06508 ಬೆಳಗಾವಿ – ಯಶವಂತಪುರ ವಿಶೇಷ ರೈಲು ಅಕ್ಟೋಬರ್​ 13 ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ನಸುಕಿನ ಜಾವ 4:30ಕ್ಕೆ ಯಶವಂತಪುರ ತಲುಪಲಿದೆ.

ಈ ರೈಲು ತುಮಕೂರು, ಅರಸಿಕೇರೆ, ಬೀರುರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ ರೈಲು ಒಂದು ಎಸಿ 2, ನಾಲ್ಕು ಎಸಿ 3, 13 ಸೆಕೆಂಡ್​ ಕ್ಲಾಸ್​ ಸ್ಲೀಪರ್​ ಕೋಚ್​, ಎರಡು ಸೆಕೆಂಡ್​ ಕ್ಲಾಸ್​ ಮತ್ತು ಎರಡು ಅಂಗವಿಕಲರಿಗಾಗಿ ಮೀಸಲಾದ ಕಂಪಾರ್ಟ್​​ಮೆಂಟ್​ ಹೊಂದಿದೆ.

WhatsApp Group Join Now
Telegram Group Join Now
Share This Article