ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೂ ಮುಂಗಾರು ಮಳೆಯ ಸೂಚನೆಯೇ ಇಲ್ಲದ ಕಾರಣ ಜೂನ್ 13ರಂದು ಕೆಆರ್‌ಎಸ್ ಜಲಾಶಯ ಬಳಿಯ ಕಾವೇರಿ ಮಾತೆಯ ಪ್ರತಿಮೆ ಮುಂದೆ ವರುಣನಿಗಾಗಿ ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಕಾವೇರಿ ಒಡಲು ಭರ್ತಿಗಾಗಿ ಕಾವೇರಿ ನೀರಾವರಿ ನಿಗಮ ವಿಶೇಷ ಪೂಜೆಯ ಮೊರೆ ಹೋಗಿದೆ. ಮಂಗಳವಾರ ಬೆಳಗ್ಗೆ ಪ್ರಸಿದ್ಧ ವೈದಿಕ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಜಲಾಶಯ ಭರ್ತಿಗೆ 12 ಮಂದಿ ವೈದಿಕ ತಂಡದಿಂದ ವಿಶೇಷ ಪೂಜೆ ನಡೆಯಲಿದೆ.
ವರುಣನಿಗಾಗಿ ಹೋಮ-ಹವನ, ಗಂಗಾಪೂಜೆ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಈ ಬಾರಿ ಆರಂಭದಲ್ಲೇ ಮಳೆ ಕೈಕೊಟ್ಟಿದ್ದು, 5 ವರ್ಷದ ಬಳಿಕ ಅತಿ ಕಡಿಮೆ ನೀರಿನ ಮಟ್ಟವನ್ನು ಕೆಆರ್‌ಎಸ್ ಜಲಾಶಯ ತಲುಪಿದೆ. ಇದರಿಂದ ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ನೀರಿಗೆ ಅಭಾವ ಶುರುವಾಗುವ ಸಾಧ್ಯತೆಯಿದೆ.