Ad imageAd image

ವಿಶೇಷ ಸಂದರ್ಶನ: ಮಳೆಯ ಅಬ್ಬರಕ್ಕೆ ತತ್ತರಿಸಿದ ಖಾನಾಪುರಕ್ಕೆ ಸಿಗಲಿದೆಯೇ ಸರಕಾರದ ಸೌಲಭ್ಯ?

ratnakar
By ratnakar
ವಿಶೇಷ ಸಂದರ್ಶನ: ಮಳೆಯ ಅಬ್ಬರಕ್ಕೆ ತತ್ತರಿಸಿದ ಖಾನಾಪುರಕ್ಕೆ ಸಿಗಲಿದೆಯೇ ಸರಕಾರದ ಸೌಲಭ್ಯ?
WhatsApp Group Join Now
Telegram Group Join Now

ಬೆಳಗಾವಿ ಜಿಲ್ಲೆಯಾದ್ಯಂತ ಅತಿ ಹೆಚ್ಚು ಮಳೆ ಬೀಳುತ್ತಿರುವ ಕಾರಣದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು ಕೆಲವಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಖಾನಾಪುರ ಭಾಗದಲ್ಲಿ ವರುಣಾರ್ಭಟಕ್ಕೆ ಬದುಕುಗಳು ತತ್ತರಿಸಿ ಹೋಗಿದ್ದು ಈ ಕುರಿತು ಪಂಚಾಯತ ಸ್ವರಾಜ್ ಸಮಾಚಾರ ಗ್ರೌಂಡ ರಿಪೋರ್ಟ್ ಮಾಡಿತ್ತು. ಖಾನಾಪುರ್ ತಾಲೂಕಿನ ಅರಣ್ಯ ಮಧ್ಯದಲ್ಲಿರುವ ಗ್ರಾಮಗಳ ಹಾಗೂ ಅಲ್ಲಿ ಜನರಗಳ ಸಮಸ್ಯೆಗಳ ಕುರಿತು ಗ್ರೌಂಡ್ ರಿಪೋರ್ಟ್ ಮಾಡಿ ಖಾನಾಪುರ್ ಶಾಸಕ ವಿಠಲ ಹಲಿಗೇಕರ್ ಅವರ ಜೊತೆ ಸಂದರ್ಶನ ಮಾಡಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ಓದಿ.

ಪ್ರಶ್ನೆ1: ಖಾನಾಪುರ್ ತಾಲೂಕ ವ್ಯಾಪ್ತಿಯಲ್ಲಿ ಅತಿಯಾದ ಮಳೆಯಿಂದ ಅರಣ್ಯದ ಮಧ್ಯದ ಗ್ರಾಮಗಳ ಜನಜೀವನ ಅಸ್ತವ್ಯಸ್ತವಾಗಿದೆ ಇದರ ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದಿರಾ?

ವಿ.ಹ: ಖಾನಾಪುರ್ ತಾಲೂಕು ಕರಾವಳಿ ಪ್ರದೇಶವಾಗಿದೆ. ಇಲ್ಲಿ ಅತಿಯಾದ ಮಳೆ ಸಾಮಾನ್ಯ. ಇಲ್ಲಿಯ ಮಳೆಯಿಂದ ಹುಬ್ಬಳ್ಳಿ, ಧಾರವಾಡ, ಮತ್ತು ನರಗುಂದ, ನವಲಗುಂದ್ ನಗರಗಳಿಗೆ ಕುಡಿಯಲು ನೀರು ಸಿಗುತ್ತದೆ. ಖಾನಾಪುರ್ ತಾಲೂಕು ಒಳ್ಳೆ ಕೆಲಸ ಮಾಡುತ್ತಿದೆ ಇದರಿಂದ ಬೇರೆ ಜನರಿಗೆ ಉಪಯೋಗವಾಗುತ್ತಿದೆ ಆದರೆ, ಇಲ್ಲಿಯ ಸ್ಥಳೀಯ ಜನತೆಗೆ ತೊಂದರೆ ಆಗುತ್ತಿದೆ. ಅರಣ್ಯ ಪ್ರದೇಶವನ್ನು ಅಭಯ ಅರಣ್ಯ ಪ್ರದೇಶದ ಮಾಡಿ ಜೊತೆಗೆ ಡೀಮ್ಡ್ ಫಾರೆಸ್ಟ್ ಎಂದು ಘೋಷಣೆ ಮಾಡಲಾಗಿದೆ. ಅರಣ್ಯ ಮಧ್ಯದಲ್ಲಿರುವ ಗ್ರಾಮಗಳ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಅರಣ್ಯ ಇಲಾಖೆ ಅನುಮತಿ ನೀಡಿದರೆ ಮೂಲಭೂತ ಸೌಕರ್ಯಗಳನ್ನು ನೀಡಲು ಸಾಧ್ಯ. ರಸ್ತೆ, ಸೇತುವೆಗಳು ,ಕುಡಿಯುವ ನೀರು ,ಹಾಗೂ ವಿದ್ಯುತ್ ಅಂತಹ ಮೂಲಭೂತ ಸೌಕರ್ಯಗಳನ್ನು ನೀಡಬಹುದು. ಕರ್ನಾಟಕ ಸರ್ಕಾರ ಈ ಎಲ್ಲಾ ಸೌಕರ್ಯಗಳನ್ನು ನೀಡಲು ಒಪ್ಪಿಗೆ ನೀಡಿದೆ ಆದರೂ ಅರಣ್ಯ ಇಲಾಖೆ ಮಂಜೂರು ಮಾಡುತ್ತಿಲ್ಲ. ಇದಕ್ಕೆ ಎಲ್ಲಾ ಸಮಸ್ಯೆಗಳ ಕಾರಣ ಅಭಯಾರಣ್ಯವಾಗಿದೆ. ಗವಾಳಿ, ಅಮಗಾಂವ, ಫಾಸ್ತೋಲಿ ,ಕೂಂಗಾಳಾ, ತಳೆವಾಡಿ ,ದೇಗಾವ, ಸಣ್ಣ ಸಣ್ಣ ಗ್ರಾಮಗಳ 70 ರಿಂದ 100 ಕುಟುಂಬಗಳ ವಾಸಿಸುವ ಗ್ರಾಮಗಳ ಗ್ರಾಮಸ್ಥರಿಗೆ ಹೆಚ್ಚು ಕಷ್ಟಕರವಾಗಿದೆ. ಉದಾಹರಣೆಗಾಗಿ ಕೃಷ್ಣಾಪುರ ಘಟನೆಯೇ ಇದಕ್ಕೆ ಒಂದು ಸಾಕ್ಷಿವಾಗಿದೆ .ಈ ಎಲ್ಲಾ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ನೀಡಬೇಕು ಎಂದು ನಾನು ವಿಚಾರ ಮಾಡುತ್ತಿದ್ದೇನೆ .
ಬೆಂಗಳೂರ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ವಿಧಾನಸಭೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು ಈ ಸಭೆಯಲ್ಲಿ ಅರಣ್ಯ ಇಲಾಖೆಯಿಂದ ಒಂದು ಪ್ರಸ್ತಾವನೆ ಬಂದಿದೆ ಅರಣ್ಯದಲ್ಲಿರುವ ಈ ಕುಟುಂಬಗಳನ್ನು ಅನುದಾನ ನೀಡಿ ಅವರನ್ನು ಸ್ಥಳಾಂತರ ಮಾಡಬೇಕು. ನಾನು ಖಾನಾಪುರ ಶಾಸಕನಾಗಿ ಹೇಳುತ್ತೇನೆ ಈ ಕುಟುಂಬಗಳಿಗೆ ಬರೀ ಅನುದಾನ ನೀಡುವುದಲ್ಲದೆ ಅದರ ಜೊತೆಗೆ ಜಮೀನುಗಳನ್ನು ನೀಡಿ ಅದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅವಾಸ್ ಯೋಜನೆಗಳ ಅಡಿಯಲ್ಲಿ ಮನೆ ಮಂಜೂರು ಮಾಡಿ ಎಂದು ಸರ್ಕಾರಕ್ಕೆ ನಾನು ತಿಳಿಸಿದ್ದೇನೆ. ಮತ್ತೆ ನಾನು ಜಿಲ್ಲಾ ಉಸ್ತುವಾರಿ ಸಚಿವರು ಜೊತೆಗೆ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳ ಜೊತೆಗೆ ಈ ವಿಷಯದ ಸಂಬಂಧಿತವಾಗಿ ಸಭೆ ಮಾಡ್ಲಿದ್ದೇನೆ. ಈ ಗ್ರಾಮಗಳನ್ನು ಸ್ಥಳಾಂತರಿಸುವ ಸಲುವಾಗಿ ಎಲ್ಲಾ ಪ್ರಯತ್ನ ನಾನು ಮಾಡಲಿದ್ದೇನೆ.

ಪ್ರಶ್ನೆ 2: ನಿಮಗೆ ರಾಜ್ಯ ಸರ್ಕಾರದಿಂದ ಏನಾದರು ಭರವಸೆಗಳು ದೊರೆತಿವೆಯೆ?

ವಿ.ಹ: ರಾಜ್ಯ ಸರ್ಕಾರ ಭರವಸೆ ನೀಡಿದೆ ಆದರೆ ಇದು ಸರ್ಕಾರ ಈ ವಿಷಯವನ್ನು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಬೇಕು. ನೀವು ಅನುದಾನ ಕೊಡುತ್ತೀರಿ, ಆದರೆ ಅದರ ಮೊದಲು ಜಮೀನು ನೀಡಿ ಎಂದು ಕೇಳಿದ್ದೇನೆ. ಈ ಜಮೀನು ಕುರಿತು ಡಿಸಿ ಅವರ ಜೊತೆ ಮಾತನಾಡಲಿದ್ದೇನೆ.

ಪ್ರಶ್ನೆ 3: ಖಾನಾಪುರ್ ತಾಲೂಕದಲ್ಲಿ ಮಾತ್ರ ಸೀಮಿತಗೊಳ್ಳಲಿದೆಯೇ ಅಥವಾ ಬೇರೆ ತಾಲೂಕಗಳಲ್ಲೂ ಕೂಡ ಸ್ಥಳಾಂತರ ಕುರಿತು ಪ್ರಸ್ತಾವನೆ ಇದೆಯೋ ?

ವಿ.ಹ: ಆ ರೀತಿ ಏನು ವಿಚಾರ ಮಾಡಬೇಡಿ ಇವರು ನಮ್ಮ ಜನ ಇದ್ದಾರೆ, ಸಣ್ಣ ಸಣ್ಣ ಗ್ರಾಮಗಳು ಇವೆ ಅವುಗಳನ್ನು ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಳಾಂತರ ಮಾಡಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯ ಗೈರಾನಾ ಜಮೀನ್ ಇವರಿಗೆ ನೀಡಬೇಕು. ಉದಾಹರಣೆಗಾಗಿ ಕಳಸ ಬಂಡೂರ ಯೋಜನೆಯಲ್ಲಿ ದೇವಾಯಶೆಟ್ಟಿ ಗ್ರಾಮಗಳನ್ನು ಸ್ಥಳಾಂತರ ಮಾಡಿದ್ದೀರಿ ಆ ರೀತಿ ಇವುಗಳನ್ನು ಸ್ಥಳಾಂತರ ಮಾಡಬೇಕು.

ಪ್ರಶ್ನೆ 4: ಸ್ಥಳಾಂತರಗೊಳ್ಳುವ ವಿಷಯದಲ್ಲಿ ಕಸ್ತೂರಿರಂಗನ ವರದಿ ಆಧಾರಿತ ಸ್ಥಳಾಂತರ ಮಾಡುವ ಕುರಿತು ಚರ್ಚೆ ಬರಬಹುದು ಇದಕ್ಕೆ ನೀವು ಏನಂತೀರಿ ?

:ವಿ.ಹ: ಕಸ್ತೂರಿ ರಂಗನ್ ಬೇರೆ ಇದು ವಿಷಯ ಬೇರೆ. ಅಭಯಾರಣ್ಯದಲ್ಲಿರುವ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಕಸ್ತೂರಿರಂಗನ ವರದಿಯಲ್ಲಿ ಈ ಸಮಸ್ಯೆ ಇಲ್ಲ. ರಿಸರ್ವ್ ಫಾರೆಸ್ಟ್ ದಲ್ಲಿ ಜನವಸತಿಗೆ ಏನು ಸಮಸ್ಯೆ ಇಲ್ಲ. ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಅರಣ್ಯ ಅಪರಾಧಗಳಾಗಿರಬಹುದು ಅಥವಾ ಅರಣ್ಯ ಸಮಸ್ಯೆ ವಾಗದಂತೆ ನಡೆದುಕೊಂಡರೆ ಏನು ಸಮಸ್ಯೆ ಇಲ್ಲ. ಕಸ್ತೂರಿರಂಗನ ವರದಿ ಖಾನಾಪುರ್ ನಾವಗೆ, ಅಂಬೋಲಿ, ನಗೋಡ ಈ ಎಲ್ಲಾ ಊರಗಳು ಇವೆ ರಸ್ತೆಯ ಪಕ್ಕದಲ್ಲಿರುವ ಗ್ರಾಮಗಳು ಕೂಡ ಕಸ್ತೂರಿರಂಗನ ವರದಿಯಲ್ಲಿ ನಮೂದಿಸಲಾಗಿದೆ. ಕಾರಣ ಕಸ್ತೂರಿರಂಗನ ವರದಿಯೆ ಬೇರೆ ಈ ಗ್ರಾಮಗಳಿಗೆ ಸ್ಥಳಾಂತರ ಮಾಡುವ ವಿಷಯವೇ ಬೇರೆ

ಪ್ರಶ್ನೆ 5: ಮೂಡಾ ಹಗರಣದ ಕುರಿತು ಬಿಜೆಪಿ ಪಾದಯಾತ್ರೆ ಕುರಿತಾಗಿ ಭಿನ್ನಮತ ಇದೆಯೆ?

ವಿ.ಹ: ನಾನು ಹೊಸ ಎಂಎಲ್ಎ, ರಾಜಕೀಯವಾಗಿ ಕೂಡ ಹೊಸಬನು ಪಕ್ಷ ನನಗೆ ಏನು ಆದೇಶ ಮಾಡುತ್ತದೆಯೋ ನಾನು ಅದನ್ನು ಬೆಂಬಲಿಸುತ್ತೇನೆ.

ಪ್ರಶ್ನೆ 6:ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಅವರು ಕೂಡ ವಾಲ್ಮೀಕಿ ಹಗರಣ ಕುರಿತು ಪಾದಯಾತ್ರೆ ಮಾಡಲಿದ್ದಾರೆ.

ವಿ.ಹ: ನಾನು ಹೊಸ ಎಂಎಲ್ಎ ಪಕ್ಷ ಏನು ಆದೇಶ ಮಾಡುತ್ತದೆ ಅದನ್ನು ನಾನು ಪಾಲಿಸುತ್ತೇನೆ

ಪ್ರಶ್ನೆ 7: 2024ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಿಂದ ಅತಿ ಹೆಚ್ಚು ನಿಮ್ಮ ಪಕ್ಷಕ್ಕೆ ಮತ ನೀಡಿದ್ದೀರಿ ಆದರೂ ಕೂಡ ನೀವು ರಾಜಕೀಯವಾಗಿ ಹೊಸಬರು ಅಂತ ಹೇಳುತ್ತೀರಿ.

ವಿ.ಹ: ನಾನು ಟಿವಿ ನೋಡಿಲ್ಲ ನನಗೇನು ಗೊತ್ತಾಗಿಲ್ಲ ಆದರೆ ವಿಧಾನಸಭೆಯಲ್ಲಿ ಮೂಡ ಹಗುರದ ಕುರಿತು ಚರ್ಚೆಯಾಯಿತು, ವಾಲ್ಮೀಕಿ ಹಗರಣದ ಕೂಡ ಚರ್ಚೆ ನಡೆಯಿತು. ಅಲ್ಲಿ ಏನು ಚರ್ಚೆವಾಯಿತು ಬೆಂಗಳೂರಿನಿಂದ ಮೈಸೂರಲ್ಲಿ ಪಾದಯಾತ್ರೆಗೆ ಹೋಗಬೇಕೆಂದು ನಿರ್ಣಯಕೊಳ್ಳಲಾಯಿತು. ಯಾಕೆಂದರೆ ಮೂಡ ಹಗರದಲ್ಲಿ ಸ್ವತಃ ಮುಖ್ಯಮಂತ್ರಿ ಶ್ಯಾಮೀಲ ಆಗಿದ್ದಾರೆ ಎಂದು ಆರೋಪ ಇದೆ ಅದರ ಸಲುವಾಗಿ ಪಾದಯಾತ್ರೆಗೆ ಮಾಡ್ಲಿದ್ದೇವೆ ಎಂದು ಎಂಬುದು ಮಾತ್ರ ಗೊತ್ತು.

ಪ್ರಶ್ಮೆ 8: ಹಾಗಾದರೆ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದೀರಿ ?
ವಿ.ಹ: ನಾನು ಕೂಡ ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದೇನೆ

ಪ್ರಶ್ಮೆ9: ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಯತ್ನಾಳ್ ಅವರ ಪಾದಯಾತ್ರೆಯಲ್ಲಿ ಕೂಡ ನೀವು ಭಾಗವಹಿಸಲಿದ್ದೀರಿ ?

ವಿ.ಹ: ನನಗೆ ನನ್ನ ಪಕ್ಷ ಮತ್ತು ನನ್ನ ಹೈಕಮಾಂಡ್ ಏನು ಆದೇಶ ಮಾಡುತ್ತಾರೋ ಅದನ್ನು ನಾನು ಪಾಲಿಸುತ್ತೇನೆ.

ಖಾನಾಪುರ ಶಾಸಕ ವಿಠಲ ಹಲಿಗೇಕರ್ ಪಂಚಾಯತ್ ಸ್ವರಾಜ್ ಸಮಾಚಾರಕ್ಕೆ ನೀಡಿದ ಸಂದರ್ಶವನ್ನು ನಮ್ಮ ಯುಟ್ಯೂಬ್ ಚಾನೆಲ್ ನಲ್ಲೂ ವೀಕ್ಷಿಸಬಹುದು.

WhatsApp Group Join Now
Telegram Group Join Now
Share This Article