Ad imageAd image

ಸಂತಾಪ ಸೂಚಿಸುವ ಸಂದರ್ಭದಲ್ಲಿ ಗದ್ದಲ ಮಾಡುತ್ತಿದ್ದ ಶಾಸಕರನ್ನು ಗದರಿದ ಸ್ಪೀಕರ್ ಯುಟಿ ಖಾದರ್

ratnakar
ಸಂತಾಪ ಸೂಚಿಸುವ ಸಂದರ್ಭದಲ್ಲಿ ಗದ್ದಲ ಮಾಡುತ್ತಿದ್ದ ಶಾಸಕರನ್ನು ಗದರಿದ ಸ್ಪೀಕರ್ ಯುಟಿ ಖಾದರ್
WhatsApp Group Join Now
Telegram Group Join Now

ಬೆಳಗಾವಿ: ಸದನದ ಕಲಾಪ ನಡೆಯುವಾಗ ಸ್ಪೀಕರ್ ಯುಟಿ ಖಾದರ್ ಕೋಪಗೊಳ್ಳೋದು ವಿರಳ ಸಂದರ್ಭಗಳಲ್ಲಿ ಮಾತ್ರ. ಬೆಳಗಾವಿ ಅಧಿವೇಶನದ ಮೊದಲ ದಿನವಾಗಿರುವ ಇಂದು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಸಂದರ್ಭದಲ್ಲಿ ಅವರು ಒಬ್ಬ ಸಚಿವ ಹಾಗೂ ಕೆಲ ಕಾಂಗ್ರೆಸ್ ಶಾಸಕರ ವರ್ತನೆಯಿಂದ ಅಸಮಾಧಾನಗೊಂಡು ಗದರಿದ ಪ್ರಸಂಗ ನಡೆಯಿತು.

ಹಿರಿಯ ಶಾಸಕ ಕೆಎಂ ಶಿವಲಿಂಗೇಗೌಡ ಅವರು ಮಾಜಿ ಸಚಿವ ಕೆ ಹೆಚ್ ಶ್ರೀನಿವಾಸ್ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾಗ ಎನ್ ಚಲುರಾಯಸ್ವಾಮಿ, ಎನ್ ಎ ಹ್ಯಾರಿಸ್, ಇಕ್ಬಾಲ್ ಹುಸ್ಸೇನ್ ಮತ್ತು ವೆಂಕಟೇಶ್ವರ ರೆಡ್ಡಿ ಸ್ಥಳ ಬಿಟ್ಟು ಕದಲುವುದು ಮತ್ತು ಮಾತಾಡುವುದನ್ನು ಗಮನಿಸಿದ ಸ್ಪೀಕರ್ ಅವರನ್ನು ಮುಲಾಜಿಲ್ಲದೆ ಗದರಿದರು.

WhatsApp Group Join Now
Telegram Group Join Now
Share This Article