ವರದಿ: ಬೀರಪ್ಪ ಸಿರಿವಾರ
ಸಿರಿವಾರ : ಹುಸೇನಪೊರ ಗ್ರಾಮದಲ್ಲಿ ಶುದ್ಧ ನೀರಿನ ಕುಡಿಯುವ ನೀರಿನ ಘಟಕ ಎರಡು ವರ್ಷಗಳಿಂದ ದುರಸ್ತಿ ಆಗದೆ ಬಂದು ಬಿದ್ದಿದೆ.
ಇದರಿಂದಾಗಿ ಹುಸೇನಪೊರ ಜನತೆ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ಜಿಲ್ಲಾ ಪಂಚಾಯತ್ ವತಿಯಿಂದ ಸ್ಥಾಪಿತಗೊಂಡದು ಆದರೆ ಯಾವುದೇ ರೀತಿಯ ನಿರ್ವಹಣೆ ಜವಾಬ್ದಾರಿಯನ್ನು ಅಧಿಕಾರಿಗಳು ನಿರ್ವಹಿಸುತ್ತಾ ಇಲ್ಲ ,ಎಂದು ಸ್ಥಳೀಯರಾದ ಡಾ. ರಾವ್ ಸಾಹೇಬ್, ಅಂಬರೀಶ್, ವಿರುಪಾಕ್ಷ, ವೆಂಕಣ್ಣ ಮತ್ತು ರಾಜಾ ಸಾಹೇಬ್ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಆದಷ್ಟು ಬೇಗ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ