ಬೆಳಗಾವಿ : ಇತ್ತಿಚೆಗೆ ಚಿಕ್ಕೋಡಿಯನ ಬಸವನಾಳಗಡ್ಡೆಯ ತೋಟದ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ಸಿದ್ದೇಶ್ವರ ಸ್ವಾಮೀಜಿ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಹಲವು ದಿನಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರವಚನ ನೀಡಿದರು. ಜಿಲ್ಲೆಯ ನಿಪ್ಪಾಣಿ ತಾಲೂಕಿನ ವಿರೂಪಾಕ್ಷಲಿಂಗ ಸಮಾಧಿ ಮಠದಲ್ಲಿ ಬೆಳಿಗ್ಗೆ ಕನ್ನಡದಲ್ಲಿ ಅರ್ಧ ತಾಸಿಗೂ ಹೆಚ್ಚು ಸಮಯ & ಮಧ್ಯಾಹ್ನ ಇಂಗ್ಲಿಷ್‌ನಲ್ಲಿ ಪ್ರವಚನ ನೀಡಿದರು.
ಪ್ರವಚನ ಆಲಿಸಲು ನೂರಾರು ಭಕ್ತರು ಪಾಲ್ಗೊಂಡಿದ್ದರು. ಇನ್ನು ಸ್ವಾಮೀಜಿಗಳನ್ನು ಸಚಿವೆ ಶಶಿಕಲಾ ಜೊಲ್ಲೆ,ಸಂಸದ ಅಣ್ಣಾಸಾಹೇಬ ಜೊಲ್ಲೆ ಬರಮಾಡಿಕೊಂಡರು.