Ad imageAd image

ರಾಜ್ಯದ ಅಭಿವೃದ್ಧಿ ಆದಾಗ ಮಾತ್ರ ದೇಶದ ಜಿಡಿಪಿ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ

ratnakar
ರಾಜ್ಯದ ಅಭಿವೃದ್ಧಿ ಆದಾಗ ಮಾತ್ರ ದೇಶದ ಜಿಡಿಪಿ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
WhatsApp Group Join Now
Telegram Group Join Now

ತುಮಕೂರು: ಯಾವುದೇ ರಾಜ್ಯ ಅಥವಾ ದೇಶ ಅಭಿವೃದ್ಧಿ ಆಗಲು ಹಳ್ಳಿ, ಜಿಲ್ಲೆಗಳ ಅಭಿವೃದ್ಧಿ ಆಗಬೇಕು. ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ಪರಸ್ಪರ ಹೊಂದಾಣಿಕೆಯಿಂದ ಆಡಳಿತ ನಡೆಸಬೇಕು. ರಾಜ್ಯದ ಅಭಿವೃದ್ಧಿ ಆದಾಗ ಮಾತ್ರ ದೇಶದ ಜಿಡಿಪಿ (GDP) ಅಭಿವೃದ್ಧಿ ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ತುಮಕೂರಿನಲ್ಲಿ (Tumakuru) 9,000 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಟ್ಟ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಸುಮಾರು 700 ಕೋಟಿ ರೂ. ಮೌಲ್ಯದ ಸವಲತ್ತು ಕೊಡಲಾಗಿದೆ. ನಾವು ದಲಿತರು, ಬಡವರು ಎಲ್ಲಾ ವರ್ಗದ ಜನರಿಗೆ ಆರ್ಥಿಕ ಶಕ್ತಿ ತುಂಬಬೇಕು. ಅಂಬೇಡ್ಕರ್ ವಾದದಂತೆ ಎಲ್ಲರಿಗೂ ಸಾಮಾಜಿಕ ಆರ್ಥಿಕ ಸ್ವಾತಂತ್ರ‍್ಯ ಕೊಡಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ. ಹಾಗಾಗಿ ನಾವು ಬಡವರ ಪರ ಕಾರ್ಯಕ್ರಮ ಮಾಡುತ್ತೇವೆ. ಈ ಕಾರ್ಯಕ್ರಮ ಜಾರಿ ಮಾಡುವಾಗ ಪಕ್ಷ, ಜಾತಿ, ಧರ್ಮ ನೋಡಿ ಮಾಡಿಲ್ಲ ಎಂದರು.

ಶಕ್ತಿ ಯೋಜನೆ ಜಾರಿ ಮಾಡುವಾಗ ಯಾವ ಭೇದ-ಭಾವ ಇಲ್ಲದೇ ಮಾಡಿದ್ದೇವೆ. ಬಡವರಿಗೆ ಸಾಮಾಜಿಕವಾಗಿ ಶಕ್ತಿ ತುಂಬಿದ್ದೇವೆ. ಸಮ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿ. ಬಹಳ ಜನ ಗ್ಯಾರಂಟಿ ಯೋಜನೆ ಮೇಲೆ ಟೀಕೆ ಮಾಡುತ್ತಾರೆ. ಅಭಿವೃದ್ಧಿ ಕೆಲಸ ನಿಂತಿದೆ ಎನ್ನುತ್ತಾರೆ. ಇವತ್ತು ಇಷ್ಟೊಂದು ಸವಲತ್ತು ಕಾಮಗಾರಿಗಳ ಶಂಕುಸ್ಥಾಪನೆ ಅಭಿವೃದ್ಧಿ ಅಲ್ವಾ? ಕಳೆದ ವರ್ಷ ಕೊಟ್ಟಿದ್ದೇವೆ. ಈ ವರ್ಷವೂ ಕೊಟ್ಟಿದ್ದೇವೆ. ರಚನಾತ್ಮಕ ವಾದ ಟೀಕೆಗಳನ್ನು ಮಾತ್ರ ಸ್ವಾಗತಿಸುತ್ತೇನೆ. ಗ್ಯಾರಂಟಿ ಯೋಜನೆಗೆ 50,000 ಕೋಟಿ ಹಣ ಮೀಸಲಿಡಲಾಗಿದ ಎಂದು ವೇದಿಕೆ ಮೇಲೆ ಇದ್ದ ಮೈತ್ರಿ ನಾಯಕರಿಗೆ ತಿವಿದರು.

ಸಂಪತ್ತು ಹೆಚ್ಚು ಕ್ರೂಢಿಕರಣ ಮಾಡಿ ಗ್ಯಾರಂಟಿ ಕೊಡುತ್ತೇವೆ. ಜಿಡಿಪಿಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮುಂದಿದೆ. ಕರ್ನಾಟಕದ ಜಿಡಿಪಿ 10.2 ಇದೆ. ನಮ್ಮ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಅದಕ್ಕೆ ಜಿಡಿಪಿ ಸಾಕ್ಷಿಯಾಗಿದೆ. ಅನ್ನಭಾಗ್ಯ ಕಾರ್ಯಕ್ರಮ ಶುರುಮಾಡಿದ್ದು ನಾನು. 5 ಕೆಜಿ ಉಚಿತ ಅಕ್ಕಿ ಕೊಟ್ಟಿದ್ದು ನಾನು. 5 ಕೆಜಿಯನ್ನು 7 ಕೆಜಿ ಮಾಡಿದ್ದು ನಾವು. ಎಸ್ಸಿ-ಎಸ್ಟಿಗಳ ವಿಶೇಷ ಅನುದಾನ ಜಾರಿಗೆ ತಂದದ್ದು ನಾವು ಎಂದು ಮೈತ್ರಿ ನಾಯಕರಿಗೆ ಕುಟುಕಿದರು.

WhatsApp Group Join Now
Telegram Group Join Now
Share This Article