spot_img
spot_img
spot_img
21.1 C
Belagavi
Friday, September 30, 2022
spot_img

ಸಿದ್ದರಾಮಯ್ಯನವರು ತುಳಸಿ ಪತ್ರಿ ತಲೆಯ ಮೇಲೆ ಹೊತ್ತುಕೊಂಡು ಅಧಿಕಾರ ನಡೆಸಿದ್ದಾರೆ : ಸಚಿವ ಕಾರಜೋಳ

spot_img

ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದ ವೇಳೆ ಸಿದ್ದರಾಮಯ್ಯನವರು ತುಳಸಿ ಪತ್ರಿ ತಲೆಯ ಮೇಲೆ ಹೊತ್ತುಕೊಂಡು ಅಧಿಕಾರ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ವ್ಯಂಗ್ಯವಾಡಿದರು.

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರದ ಭ್ರಷ್ಟಾಚಾರದಲ್ಲಿ ಮುಳಗಿ ಹೋಗಿದೆ ಎಂದು ಆರೋಪ ಮಾಡುವ ಸಿದ್ದರಾಮಯ್ಯ ಅವರು ತುಳಸಿ ಎಲೆ ತಲೆ ಮೇಲೆ ಇಟ್ಟುಕೊಂಡು ಅಧಿಕಾರ ನಡೆಸಿದ್ದಾರೆ. ಸುಳ್ಳು ಹೇಳುತ್ತಲೆ ಕಾಂಗ್ರೆಸ್ ಖಾಲಿಯಾಗಲಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಇನ್ನು 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇನೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಇದೇ ಮೋಸಗಾರಿಕೆ ಮಾಡಿಕೊಂಡು ದೇಶದಲ್ಲಿ ಕಾಂಗ್ರೆಸ್ ಆಡಳಿತ ಮಾಡಿದೆ.ಜನರಿಗೆ ಬೇಕಾಗಿರೋ ಅಕ್ಕಿ ಅಲ್ಲ ಸ್ವಾಭಿಮಾನದ ಬದುಕು.ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದ್ದಾರು.

ರಾಜ್ಯದಲ್ಲಿ ಅಕಾಲಿಕ ಮಳೆಯ ಅಬ್ಬರ ಜೋರಾಗಿದೆ.ಮಳೆ ಬರೋದು ಸಂತೋಷ ಸಂಗತಿಯಾಗಿದೆ. ಮಳೆ ಬಂದರೆ ಕೆಟ್ಟಲ್ಲ, ಮಗ ಉಂಡ್ರೆ ಕೆಟ್ಟಲ್ಲ ಎಂಬ ನಾನುಡಿ ಇದೆ. ಮಳೆಯಿಂದ ಕಬ್ಬು ಬೆಳೆಗೆ ಅನುಕೂಲ ಆಗಿದೆ. ಶೇ‌ ೧೦ ರಷ್ಟು ಜನರಿಗೆ ತೊಂದರೆ ಆಗಿದೆ ಎಂದರು.

ತೊಂದೆರೆಯಾದ ರೈತರ ಸ್ಪಂಧನೆ ಮಾಡುವಂತೆ ಸೂಚನೆ ನೀಡಲಾಗಿದೆ‌. ಜಿಲ್ಲಾಧಿಕಾರಿಗೆ ಚಿಕ್ಕೋಡಿಯಲ್ಲಿ ಸಭೆ ಮಾಡಲೂ ಹೇಳಿದ್ದೇನೆ ಎಂದರು.

ಇನ್ನು ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಹಣಮಂತ ‌ನಿರಾಣಿ ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಅರುಣ್ ಶಹಾಪುರ ಆ್ಯಕ್ಟಿವ್ ಆಗಿದ್ದು, ‌ಶಿಕ್ಷಕರ ಸಮಸ್ಯೆಗೆ ಸ್ಪಂದನೆ ಮಾಡಿದ್ದಾರೆ.ಪದವೀಧರ, ಶಿಕ್ಷಕರ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಅವುಗಳ ಸಾಧನೆಯನ್ನು ‌ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುತ್ತೇವೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಬಣ ರಾಜಕೀಯ ‌ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಬಣ ರಾಜಕೀಯ ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಜಾರಕಿಹೊಳಿ ಸೇರಿ ಎಲ್ಲರೂ ಸಭೆಗೆ ಬರುತ್ತಾರೆ. ಎರಡು ಬಣದ ಮುಖಂಡರು ಸಭೆಗೆ ಬರುತ್ತಾರೆ, ಎರಡು ಜಿಲ್ಲೆಯ ಮುಖಂಡರು ಬರುತ್ತಾರೆ ಎಂದರು.

ವಿಷಯಾಧಾರಿತ ಭಿನ್ನಪ್ರಾಯ ಅಭಿಪ್ರಯ ಸಹಜ. ಇದು ಎಲ್ಲಾ ಪಕ್ಷಗಳಲ್ಲಿ ವಿಷಯಾಧಾರಿತ ಭಿನ್ನಾಪ್ರಾಯ ಸಹಜ. ಬಿಜೆಪಿ ಎಲ್ಲಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಸಚಿವೆ ಶಶಿಕಲ್ಲಾ ಜೊಲ್ಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

spot_img

Related News

ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ಧಿಡೀರ್ ದಾಳಿ

ಬೆಂಗಳೂರು : ರಾಜ್ಯದ ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ತಂಡ ಇಂದು ಧಿಡೀರ್ ದಾಳಿ ನಡೆಸಿದೆ. ವಾಹನ ಸವಾರರಿಂದ ಹಣ ವಸೂಲಿ ದೂರುಗಳು ಕೇಳಿ ಬಂದ ಹಿನ್ನೆಲೆ ಕಲಬುರಗಿ, ಬೀದರ್...

ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ 1 ವರ್ಷ ಜೈಲು, 50 ಸಾವಿರ ದಂಡ

ನವದೆಹಲಿ: ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ ಭಾರತೀಯ ದೂರಸಂಪರ್ಕ ಮಸೂದೆ 2022 ರ ಸಿದ್ಧಪಡಿಸಿದ ಕರಡು ಪ್ರತಿಯ ಪ್ರಕಾರ, ನೀವು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ 50,000...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -