ವಿಜಯಪುರ: ನಕ್ಸಲರಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದು ತಪ್ಪು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರು ಶಸ್ತ್ರಾಸ್ತ್ರಗಳನ್ನು ಮುಂದಿಟ್ಟು ಬಳಿಕ ಶರಣಾಗತಿ ಆಗಬೇಕಿತ್ತು. ಸಿದ್ದರಾಮಯ್ಯ ಅವರೇ ನಕ್ಸಲರಿಗೆ ಶರಣಾಗಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಎಷ್ಟೋ ಪೊಲೀಸ್ ಅಧಿಕಾರಿಗಳು, ರೈತರು ಪ್ರಾಣ ಕಳೆದುಕೊಂಡಿದ್ದಾರೆ. ನಕ್ಸಲರಿಗೆ ಏನು ಕೊಡಬೇಕೆಂದು ಕೋರ್ಟ್ ತೀರ್ಮಾನ ಮಾಡುತ್ತದೆ. ನಕ್ಸಲರಿಂದ ಹತ್ಯೆಯಾದ ಪೊಲೀಸರು, ನಾಗರಿಕರ ಕುಟುಂಬಕ್ಕೆ ಏನು ಕೊಟ್ರು? ಮುಖ್ಯವಾಹಿನಿಗೆ ಬರಬೇಕು ಅಂದರೆ ಕಾನೂನು ಪ್ರಕಾರ ಆಗಬೇಕು ಎಂದು ಹೇಳಿದ್ದಾರೆ.
ಇಂದು ಶರಣರಾಗಿ ನಾಳೆ ವೆಪನ್ಸ್ ತಂದು ಕೊಡಿ ಅಂತಾರೆ. ಮುಂದಿನ ದಿನಗಳಲ್ಲಿ ಇದೊಂದು ಸ್ಟೈಲ್ ಆಗುತ್ತೆ. ಕೆಲ ದಿನ ಬಂದೂಕು ಹಾಕಿಕೊಂಡು ಓಡಾಡುತ್ತಾರೆ. ನಾಲ್ಕಾರು ಕೊಲೆ ಮಾಡುತ್ತಾರೆ. ನಂತರ 6 ತಿಂಗಳು ಮಾಯವಾಗುತ್ತಾರೆ. ನಂತರ ಶರಣಾಗುತ್ತಾರೆ ಅವರಿಗೆ ವಿಶೇಷ ಪ್ಯಾಕೇಜ್ ಕೊಡುತ್ತಿರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿಯ ಮಾಜಿ ಶಾಸಕರ ಸಭೆ ವಿಚಾರವಾಗಿ ಮಾತನಾಡಿದ ಅವರು, ನಿನ್ನೆ 17 ಜನರು ನನಗೆ ಕರೆ ಮಾಡಿದ್ದರು. ನಾವು ಯಾರು ಆತ್ಮ ಸಾಕ್ಷಿಯಾಗಿ ಹೋಗಿಲ್ಲ. ರಾಜ್ಯಾಧ್ಯಕ್ಷ ಹುದ್ದೆಯಲ್ಲಿರುವ ಕಾರಣದಿಂದ ಹೊಗಿದ್ದೇವೆ. ನಾವು ಪಕ್ಷದ ವಿರುದ್ದ ಹೋಗಿಲ್ಲ. ಅವರ ಸಭೆ ಕರೆದಿರುವ ಬಗ್ಗೆ ನಮ್ಮದೇನು ವಿರೋಧವಿಲ್ಲ. ಅವರೆಲ್ಲ ಮಾಜಿಗಳು ಆಗಲು ಕಾರಣರು ಯಾರು. ಅದು ಆತ್ಮಾವಲೋಕನ ಅಲ್ಲಿ ಆಗಬೇಕಿತ್ತು. ಅವರೆಲ್ಲ ಆಯ್ಕೆ ಆಗಿದ್ದರೆ ನಮ್ಮ ಸರ್ಕಾರ ಇರುತಿತ್ತು. ಅವರನ್ನೆಲ್ಲಾ ಸೋಲಿಸಿದ ಕಾಣದ ಕೈಗಳು ಯಾವವು? ಆ ಕೈಗಳು ಎರಡೋ, ನಾಲ್ಕು ಅನ್ನೋದು ಚರ್ಚೆ ಆಗಿದ್ದರೆ, ಈಗ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ ಎಂದಿದ್ದಾರೆ.