spot_img
spot_img
spot_img
21.3 C
Belagavi
Sunday, October 1, 2023
spot_img

ಶ್ರೀಗಳ ನಡೆ ಭಕ್ತರ ಕಡೆ

ಶ್ರಾವಣ ಮಾಸದ ಅಂಗವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಶ್ರೀ ರುದ್ರಾಕ್ಷಿ ಮಠ ನಾಗನೂರು ಬೆಳಗಾವಿ ಇವರ ಆಶ್ರಯದಲ್ಲಿ, ಬೆಳಗಾವಿ ಮಹಾನಗರ ಹಾಗೂ ಸುತ್ತು ಮುತ್ತಲಿನ ಗ್ರಾಮಗಳಲ್ಲಿ, ಜನಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

 

ದಿ.06.09.2023 ರಂದು ಸದಾಶಿವನಗರದಲ್ಲಿ ಪರಮಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ *ಜನಜಾಗೃತಿ ಪಾದಯಾತ್ರೆಯನ್ನು* ಹಮ್ಮಿಕೊಳ್ಳಲಾಗಿತ್ತು. ಸದಾಶಿವ್ ನಗರದ ಭಕ್ತರು ಎಲ್ಲ ಮಾರ್ಗಗಳನ್ನು ರಂಗೋಲಿ ಹಾಗೂ ತಳಿರು ತೋರಣಗಳಿಂದ ಅಲಂಕಾರ ಮಾಡಿ ಶ್ರೀಗಳಿಗೆ ಭವ್ಯ ಸ್ವಾಗತವನ್ನು ನೀಡಿದರು..

ಪಾದಯಾತ್ರೆಯು ಸದಾಶಿವನಗರದ ವಿವಿಧ ಮಾರ್ಗಗಳಲ್ಲಿ ಸಾವಿರಾರು ಭಕ್ತರೊಂದಿಗೆ ಸಂಚರಿಸಿ, ಸದಾಶಿವನಗರದ ಶಿವಾಲಯದಲ್ಲಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಅವರು ಆಶೀರ್ವಚನವನ್ನು ನೀಡಿ, ಭಕ್ತರು ತಮ್ಮ ಮಕ್ಕಳಿಗೆ ಧಾರ್ಮಿಕ ಸಂಸ್ಕಾರಗಳನ್ನು, ಆಚರಣೆಗಳನ್ನು ಕಲಿಸಿಕೊಡಬೇಕು. ಆ ನಿಟ್ಟಿನಲ್ಲಿ ಸಮಾಜದ ಎಲ್ಲ ಬಾಂಧವರನ್ನು, ಎಲ್ಲಾ ಮಕ್ಕಳನ್ನು ಸಂಸ್ಕಾರವಂತರಾಗಿ ಮಾಡಲು ಶ್ರೀಮಠದಿಂದ ರಜಾ ದಿನಗಳಲ್ಲಿ ಸಂಸ್ಕಾರ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಆ ಶಿಬಿರದ ಲಾಭವನ್ನು ಭಕ್ತಾದಿಗಳು ಪಡೆದುಕೊಳ್ಳಬೇಕು. ಸಮಾಜದ ಎಲ್ಲ ಬಾಂಧವರು ಸಂಸ್ಕಾರವಂತರಾಗಿ ಶರಣರ ತತ್ವಗಳನ್ನು, ಆದರ್ಶಗಳನ್ನು ಪಾಲಿಸಬೇಕೆಂದು ತಿಳಿಸಿದರು.

ಪಾದಯಾತ್ರೆ ಸಮಾರಂಭದಲ್ಲಿ ಪೂಜ್ಯ ಓಂ ಗುರೂಜಿ, ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ನ್ಯಾಯವಾದಿ ಬಸವರಾಜ್ ರೊಟ್ಟಿ, ಡಾ. ರವಿ ಪಾಟೀಲ್ ವೀರೇಶ್ ಕಿವಡಸನ್ನವರ, ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ, ಯುವ ಘಟಕದ ಸಂಚಾಲಕ ಪ್ರೆಮ ಮಲ್ಲಪ್ಪ ಚೌಗಲಾ, ಉಪಾಧ್ಯಕ್ಷರಾದ ಬೆಂಡಿಗೇರಿ, ಮೋಹನ ಗುಂಡ್ಲೂರು, C M ಬೂದಿಹಾಳ, A I ಗಡದವರ್, ವೀರಣ್ಣಾ ಚಿನಗುಂಡಿ, ಸದಾನಂದ ಬಶಟ್ಟಿ, F R ಪಾಟೀಲ್, ಶಿವಕುಮಾರ್ ಪಾಟೀಲ್, ಅನ್ನಪೂರ್ಣ ಮಳಗಲಿ, ಅನುಷಾ ಬಶಟ್ಟಿ, ಸುಜಾತ ಮತ್ತಿಕಟ್ಟಿ, ಶೋಭಾ ಶಿವಳ್ಳಿ, ದಾಕ್ಷಾಯಿಣಿ ಉಡದಾತ, ಮಹಾದೇವಿ ಹಿರೇಮಠ, ರತ್ನಾ ಬೆಣಚಮರಡಿ, ಸರಳಾ ಹಿರೇಕರ್, ನಗರ ಸೇವಕಿ ಸವಿತಾ ಕಾಂಬಳೆ, ಸದಾಶಿವನ ನಗರದ ಮಹಿಳಾ ಮಂಡಲದ ಸದಸ್ಯರು, ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

Related News

ಸರಕಾರದ ಜೊತೆ ಎಲ್ಲ ಸಮಾಜದವರೂ ಇದ್ದಾರೆ – ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯದ ಬೆಂಬಲ ಸಿಕ್ಕಿದೆ. ಕೇವಲ ಒಂದು ಸಮುದಾಯದ ಬೆಂಬಲದಿಂದ ಅಧಿಕಾರಕ್ಕೇರಿಲ್ಲ. ಎಲ್ಲಾ ಸಮಾಜದವರೂ ಸರಕಾರದೊಂದಿಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್...

ನಿಮ್ಮ ಆಸ್ತಿಗಳ ಮೌಲ್ಯಗಳನ್ನು ಅಪಮೌಲ್ಯ ಮಾಡಬೇಡಿ ನೈಜ್ಯ ಬೆಲೆಗೆ ವ್ಯವಹಾರ ಮಾಡಿ

ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರ ಸ್ಥಿರ ಆಸ್ತಿಗಳು ಮಾರ್ಗಸೂಚಿ ಬೆಲೆ ಪರಿಷ್ಕರಣೆ ಅಕ್ಟೋಬರ್ ಒಂದರಿಂದ ಶೆ. 10%ರಿಂದ 30%ವರೆಗೆ ಹೆಚ್ಚಳ ಮಾಡುವುದಾಗಿ ಆದೇಶ ಹೊರಡಿಸಿದೆ. ಅದರ ಅಂಗವಾಗಿ ಬೆಳಗಾವಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -