ಬೆಂಗಳೂರು: ಗಂಡ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಚಿತ್ರ ವೈರಲ್ ಆಗುತ್ತಿರುವುದು, ಡ್ರಾಫ್ಟ್ ಮಾತ್ರ. ಆದರೆ ಅದರಲ್ಲಿ ಕೆಲವು ಬದಲಾವಣೆ ಮಾಡಲಿದ್ದೇವೆ. ಅದರಲ್ಲಿ ಬ್ಯಾಂಕ್ ಪಾಸ್‍ಬುಕ್ ಸೇರಿಸಲಾಗುವುದು. ಜಾತಿ ಬದಲಿಗೆ ವರ್ಗ ಎಂದು ಬದಲಾಯಿಸಲಾಗುವುದು. 90% ಬಿಪಿಎಲ್ ಕಾರ್ಡ್ ಮಹಿಳೆಯರೇ ಯೋಜನೆಯ ಪ್ರಮುಖ ಫಲಾನುಭವಿಗಳಾಗಲಿದ್ದಾರೆ. ಈ ಬಗ್ಗೆ ಆ. 17 ಅಥವಾ 18ರಂದು ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.