spot_img
spot_img
spot_img
spot_img
spot_img
spot_img
spot_img
spot_img
spot_img
20.4 C
Belagavi
Sunday, September 24, 2023
spot_img

ಉತ್ತಮ ಸಮಾಜ, ಸೌಹಾರ್ದಯುತ ಬದುಕಿಗೆ ಶ್ರಾವಣದ ಪ್ರವಚನಗಳು ಪ್ರೇರಕ : ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: ಉತ್ತಮ ಸಮಾಜಕ್ಕಾಗಿ ಹಾಗೂ ಸೌಹಾರ್ದಯುತ ಬದುಕಿಗಾಗಿ ಶ್ರಾವಣ ಮಾಸದ ಪ್ರವಚನಗಳು ನಮ್ಮ ಜೀವನದಲ್ಲಿ ಪ್ರೇರಕ ಶಕ್ತಿಗಳಾಗುತ್ತಿವೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅವರು ತಾಲೂಕಿನ ಸಾಂಬ್ರಾ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಡವಿ ಸಿದ್ದೇಶ್ವರಮಠದ ಶ್ರೀ ಅಡವೀಶ್ವರ ದೇವರು ಅವರ ನೇತೃತ್ವದಲ್ಲಿ ಶ್ರಾವಣ ಮಾಸದ ನಿಮಿತ್ತ ಆಯೋಜಿಸಲಾಗಿದ್ದ ದ್ವಿತೀಯ ವರ್ಷದ ‘ಆಧ್ಯಾತ್ಮಿಕ ಪ್ರವಚನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರವಚನಗಳು ಮಾನವನ ಬದುಕಿಗೆ ಸಹಕಾರಿಯಾಗಿದ್ದು, ಪ್ರವಚನಗಳನ್ನು ಆಲಿಸುವುದರಿಂದ ಮನೆ-ಮನಗಳಿಗೆ ಶಾಂತಿ ಸಿಗುವುದರಲ್ಲಿ ಬೇರೆ ಮಾತಿಲ್ಲ, ಜೊತೆಗೆ ಹೊಸ ಉಲ್ಲಾಸವನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ರವಾನಿಸುತ್ತಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸುಳೇಭಾವಿಯ ಪೂಜ್ಯರು, ಗ್ರಾಮದ ಹಿರಿಯರು, ಶಿವಾಜಿ ದೇಸಾಯಿ, ನಾಗೇಶಣ್ಣ ದೇಸಾಯಿ, ಸಂಜು ನಾಗುಂಡ ಪಾಟೀಲ, ಸದಾಶಿವ ಪಾಟೀಲ, ಸುರೇಶ ದೇಸಾಯಿ, ಮೋಹನ ನಾಯ್ಕ, ಮಹಿಳಾ ಮಂಡಳದವರು, ಗ್ರಾಮ ಪಂಚಾಯಿತಿ ಪದಾಧಿಕಾರಿಗಳು ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related News

ರೈತರ ಹೋರಾಟಕ್ಕೆ ಸಾಂಕೇತಿಕವಾಗಿ ಬೆಂಬಲ ಸೂಚಿಸಲು ಹೊರಟಿದ್ದೇನೆ -ಹೆಚ್​ಡಿಕೆ

ಬೆಂಗಳೂರಿಗೆ ಆಗಮಿಸಿದ ಹೆಚ್​ಡಿ ಕುಮಾರಸ್ವಾಮಿ ಅವರು ಕೇಂಪೇಗೌಡ ಏರ್ಪೋರ್ಟ್ ನಲ್ಲಿ ಮಾತನಾಡಿದರು. ಈ ವೇಳೆ, ಅಮಿತ್ ಷಾ ಹಾಗೂ ನಡ್ಡಾ ಜೊತೆ ನಡೆದ ಚರ್ಚೆಗಳ ಬಗ್ಗೆ ದೆಹಲಿಯಲ್ಲಿ ಹೇಳಿದ್ದೇನೆ. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ...

9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ

ಬೆಂಗಳೂರು: 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. 9ನೇ ತರಗತಿ ಮಕ್ಕಳ ಕಲಿಕಾ ದೃಷ್ಟಿಯಿಂದ ಮಕ್ಕಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ನಡೆಸಲು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -