ಬೆಂಗಳೂರು : ಪೆಟ್ರೋಲ್,ಅಡುಗೆ ಎಣ್ಣೆ ಸೇರಿ ನಿರಂತರ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಕೆಲವೇ ದಿನಗಳಲ್ಲಿ ಮತ್ತೊಂದು ಬಿಗ್ ಶಾಕ್ ಎದುರಾಗಲಿದೆ. ಅದುವೆ ವಿದ್ಯುತ್ ದರ ಏರಿಕೆ, ಹೌದು ಇದೇ ವಿಚಾರವಾಗಿ ವಿದ್ಯುತ್ ನಿಗಮಗಳು ಈಗಾಗಲೇ ಸರ್ಕಾರಕ್ಕೆ ವಿದ್ಯುತ್ ದರ ಏರಿಕೆ ಪ್ರಸ್ತಾಪ ಸಲ್ಲಿಸಿವೆ ಎನ್ನಲಾಗಿದೆ.
ವರ್ಷದಿಂದ ವರ್ಷಕ್ಕೆ ಇಂಧನ ಮೂಲಗಳಿಂದ ವಿದ್ಯುತ್ ಖರೀದಿಯ ವೆಚ್ಚವು ಹೆಚ್ಚಾಗುತ್ತಿದೆ. ಈ ಹಿನ್ನೆಲ್ಲೆ ಎಸ್ಕಾಂಗಳಿಂದ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 1ರೂಪಾಯಿ 50 ಪೈಸೆ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹಿಂದಿನ ವರ್ಷ ಪ್ರತಿ ಯೂನಿಟ್ ಗೆ 1.39 ಪೈಸೆಗೆ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವೂ ಕೇವಲ 30 ಪೈಸೆಯಷ್ಟೇ ದರ ಪರಿಷ್ಕರಣೆ ಮಾಡಿತ್ತು. ಹೀಗಾಗಿ ಈ ವರ್ಷ 1.50 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿ ಎನ್ನಲಾಗಿದೆ.