Ad imageAd image

ಚಳಿಗಾಲ ಅಧಿವೇಶನ: ಬೆಳಗಾವಿಯಲ್ಲಿ ಎಂಇಎಸ್​ ಮಹಾಮೇಳಕ್ಕೆ ಶಿವಸೇನೆ ಬೆಂಬಲ

ratnakar
ಚಳಿಗಾಲ ಅಧಿವೇಶನ: ಬೆಳಗಾವಿಯಲ್ಲಿ ಎಂಇಎಸ್​ ಮಹಾಮೇಳಕ್ಕೆ ಶಿವಸೇನೆ ಬೆಂಬಲ
WhatsApp Group Join Now
Telegram Group Join Now

ಬೆಳಗಾವಿ:ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್​ 9 ರಿಂದ 20ವರೆಗೆ 2024ನೇ ಸಾಲಿನ ಚಳಿಗಾಲದ ಅಧಿವೇಶನ  ನಡೆಯಲಿದೆ. ಅಧಿವೇಶನ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ  ಬೆಳಗಾವಿಯಲ್ಲಿ ಮಹಾಮೇಳ ನಡೆಸಲು ಮುಂದಾಗಿದೆ. ಎಂಇಎಸ್​ನ ಮಹಾಮೇಳಕ್ಕೆ ಉದ್ಧವ ಠಾಕ್ರೆ ಬಣದ ಶಿವಸೇನೆ ಬೆಂಬಲ ವ್ಯಕ್ತಪಡಿಸಿದೆ. ಅಧಿವೇಶನ ಮೊದಲ ದಿನವೇ ಅನುಮತಿ ಇಲ್ಲದೆ ​ಮಹಾಮೇಳ ನಡೆಸಲು ಎಂಇಎಸ್ ಸಿದ್ಧತೆ ನಡೆಸಿದೆ.

ಈ ಮಹಾಮೇಳ ನಡೆಸಲು ಅನುಮತಿ ನೀಡಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕೆಂದು ಕೊಲ್ಲಾಪುರ ಜಿಲ್ಲಾಧಿಕಾರಿಗೆ ಉದ್ಧವ ಠಾಕ್ರೆ ಬಣದ ಶಿವಸೇನೆ ಮನವಿ ಸಲ್ಲಿಸಿದೆ. ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿದೆ. ಆದರೆ, ಬೆಳಗಾವಿಯಲ್ಲಿ ಮಹಾಮೇಳ ಮಾಡಲು ಎಂಇಎಸ್​ಗೆ ಮೂರು ವರ್ಷದಿಂದ ಅಲ್ಲಿನ ಜಿಲ್ಲಾಡಳಿತ ಅನಮತಿ ನೀಡುತ್ತಿಲ್ಲ. ಮಹಾರಾಷ್ಟ್ರದ ನಾಯಕರು ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸುತ್ತಿದ್ದಾರೆ. ಈ ಬಾರಿ ಎಂಇಎಸ್ ಮಹಾಮೇಳಕ್ಕೆ ಮತ್ತು ಮಹಾರಾಷ್ಟ್ರ ನಾಯಕರು ಬೆಳಗಾವಿ ಪ್ರವೇಶಕ್ಕೆ ಅನುಮತಿ ಕೊಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಈ ಬಾರಿಯೂ ಎಂಇಎಸ್ ಮಹಾಮೇಳಗೆ ಅನುಮತಿ ಕೊಡದಿದ್ದರೇ, ಮಹಾರಾಷ್ಟ್ರದಲ್ಲಿರುವ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನಕ್ಕೆ ಬರುವ ಕರ್ನಾಟಕದ ಸಚಿವರು ಮತ್ತು ಶಾಸಕರಿಗೆ ನಾವು ಅಡ್ಡಿ ಪಡಿಸುತ್ತೇವೆ. ಡಿಸೆಂಬರ್ 9 ರಂದು ಎರಡೂ ರಾಜ್ಯಗಳ ಮಧ್ಯದ ರಸ್ತೆ ಬಂದ್ ಮಾಡುತ್ತೇವೆ. ಕರ್ನಾಟಕದ ರಾಜಕಾರಣಿಗಳು ಮಹಾರಾಷ್ಟ್ರ ಪ್ರವೇಶ ಮಾಡಲು ಬಿಡುವುದಿಲ್ಲ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದೆ. ಈ ಮೂಲಕ ಉದ್ಧವ ಠಾಕ್ರೆ ಬಣದ ಶಿವಸೇನೆ ಪರೋಕ್ಷವಾಗಿ ಕರ್ನಾಟಕ ಸರ್ಕಾರಕ್ಕೆ ಧಮ್ಕಿ ಹಾಕಿದೆ.

ಗಡಿ ವಿಚಾರವಾಗಿ ಎಂಇಎಸ್​ ಕರ್ನಾಟಕದ ಜೊತೆ ಕ್ಯಾತೆ ತೆಗೆಯುತ್ತಾ ಬಂದಿದೆ. ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಎಂಇಎಸ್​ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಆಚರಿಸಲು ಮುಂದಾಗುತ್ತದೆ. ಆದರೆ, ಬೆಳಗಾವಿ ಜಿಲ್ಲಾಧಿಕಾರಿಯವರು ಇದಕ್ಕೆ ಅನುಮತಿ ನೀಡುವುದಿಲ್ಲ. ಅನುಮತಿ ಇಲ್ಲದಿದ್ದರೂ ಎಂಇಎಸ್​ ಕರಾಳ ದಿನಾಚರಣೆ ಆಚರಿಸುತ್ತದೆ.

ಈ ಬಾರಿ ಕನ್ನಡ ರಾಜ್ಯೋತ್ಸವ ದಿನ ಕರಾಳ ದಿನ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಮಹರಾಷ್ಟ್ರ ಏಕೀಕರಣ ಸಮಿತಿಯ 46 ಜನ ಮುಖಂಡರು ಸೇರಿದಂತೆ 1,500 ಜನರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾಜಿ ಶಾಸಕ ಮನೋಹರ ಕಿಣೇಕರ, ಎಮ್​ಇಡಿ ಮುಖಂಡ ಶುಭಂ ಶಳಕೆ, ರಮಾಕಾಂತ ಕೊಂಡುಸ್ಕರ, ವಿಕಾಸ ಕಲಘಟಗಿ ಶಿವಸೇನೆ ಮುಖಂಡ ಪ್ರಕಾಶ ಮರಗಾಳೆ ಸೇರಿದಂತೆ 46 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

WhatsApp Group Join Now
Telegram Group Join Now
Share This Article