ವಿಶ್ವ ಹಿಂದೂ ಪರಿಷತ್ ಸ್ಥಾಪನೆಯ 60ನೇ ವರ್ಷದ ಷಷ್ಠಪೂಂಜ ನಿಮಿತ್ಯ ದೇಶಾದ್ಯಂತ ಯುವ ಘಟಕ ಬಜರಂಗದಳ ವತಿಯಿಂದ ಪ್ರತಿ ಗ್ರಾಮ ಪ್ರತಿ ನಗರಗಳಲ್ಲಿ ಶೌರ್ಯ ಜಾಗರಣ ರಥಯಾತ್ರೆ ಸಂಚರಿಸಲಿದೆ ಎಂದು ಸುದ್ದಿಗಾರರೊಂದಿಗೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಕದಂ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶೌರ್ಯ ಜಾಗರಣ ರಥ ಪ್ರತಿ ಗ್ರಾಮ ಪ್ರತಿ ನಗರಗಳಲ್ಲಿ ಸಂಚಾರಿದ್ದು ಯುವಕರಲ್ಲಿ ದೇಶಭಕ್ತಿ ಸೇವಾ ಭಾವ ,ಸಂಸ್ಕಾರ ,ಧಾರ್ಮಿಕ ಜಾಗೃತಿ ರಾಷ್ಟ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಈ ರಥವು ನಮ್ಮ ನಾಡಿನ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ವೀರ ಯೋಧರು ಸ್ವತಂತ್ರ ಹೋರಾಟಗಾರ ಸ್ಮರಣೆ ಹಾಗೂ ಜಾಗೃತಿ ಹೊಡಿಸಲು ರಥ ಯಾತ್ರೆಯ , ಉದ್ದೇಶವಾಗಿದೆ.
ದಿನಾಂಕ 30/ 10/2023 ಚಿಕ್ಕೋಡಿ ತೋರಣಹಳ್ಳಿ ಮಾರುತಿ ಮಂದಿರದಿಂದ ಪ್ರಾರಂಭವಾಗಿ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ದಿನಾಂಕ 5/10/2023 ರಂದು ಸಂಜೆ ರಾಮದುರ್ಗ ಶಬರಿಕೊಳ್ಳಲು ತಲುಪಲಿದೆ. ಹಾಗೂ ದಿನಾಂಕ 6/10/2023 ರಿಂದ ಮತ್ತೆ ಪ್ರಾರಂಭವಾಗಿ ಬೆಳಗಾವಿ ಗ್ರಾಮಂತರ ಜಿಲ್ಲೆ ಸಂಚರಿಸಿ ದಿನಾಂಕ 9.10.2023 ರಿಂದ ರಾತ್ರಿ ಬೆಳಗಾವಿ ಜ್ಯೋತಿಬಾ ಮಂದಿರದಲ್ಲಿ ವಾಸ್ತವ್ಯ ಇರಲಿದೆ.
ದಿನಾಂಕ 10.10.2023 ಮುಂಜಾನೆ 8: ಗಂಟೆಗೆ ಪ್ರಾರಂಭವಾಗಿ ಅಂಬೇಡ್ಕರ, ಚೆನ್ನಮ್ಮ , ಮಹಾನ್ ಪುರುಷರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚೆನ್ನಮ್ಮ ವೃತ್ತದ ಮುಖಾಂತರ ಕಾಕತಿ ವ್ಸೇಸ ನಾರಬೇಕರಗಲ್ಲಿ ಮಾರುತಿ ಗಲ್ಲಿ ಸಂಯುಕ್ತ ಮಹಾರಾಷ್ಟ್ರಚೌಕ, ಸಂಭಾಜಿ ಚೌಕ್ ತಹಶೀಲ್ದಾರ್ ಗಲ್ಲಿ ಮಹದ್ವಾರ್ ರೋಡ್ ಕಪ್ಲೆಶ್ವರ್ ಮಂದಿರ್
ಶಿವಾಜಿ ಉದ್ಯಾನ, ಶಾಪುರ್, ಕಡೆ ಬಜಾರ್, ನೇಕಾರಗಲ್ಲಿ ಮಂಗಾಯಿ ಕ್ಯಾಂಟೀನ ಕಟ್ಟ ಕರಭಾರಗಲ್ಲಿ ,
ಸರ್ಕಾರಿ 31 ನಂಬರ್ ಶಾಲೆ, ನಾಜೀರ್ ಕ್ಯಾಂಪ್ ಗೋಮಟೇಶ್ ವಿದ್ಯಾರ್ಥಿ ಅರ್ಪಿಡಿ ಕ್ರಾಸ್ ಹರಿ ಮಂದಿರ್ ಧರ್ಮವೀರ ಸಂಭಾಜಿ ಚೌಕ್, ರಘುನಾಥ್ ಪೇಟ್ 4ನೇ ಗೇಟ್ ಮಾರ್ಗ ಮಚ್ಚೆ ಕ್ರಾಸ್ ಮಜಗಾವ್ ಕ್ರಾಸ್, ಬ್ರಹ್ಮನಗರ್, ಕೊನೆಯದಾಗಿ ಪೀರಣವಾಡಿ ನಾಕ ತಲುಪಿ ಅಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸಿ
ಶೌರ್ಯ ಜಾಗರಣ ರಥಯಾತ್ರೆ ಮುಕ್ತಾಯಗೊಳ್ಳಲಿದೆ.
ಅಲ್ಲದೆ ಬೆಳಗಾವಿ ಗ್ರಾಮೀಣ ಜಿಲ್ಲೆಯಲ್ಲಿ ಸಂಚರಿಸಿ ಕೊನೆಗೆ ನಂದಗಡ್ ರಾಯಣ್ಣನ ಸಮಾಧಿ ಹತ್ತಿರ ಮುಕ್ತಾಯಗೊಳ್ಳಲಿದೆ . ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು ಭೀಮಕಣ್ಣಾ ಲೋಹಾರ್,
ಆನಂದ ಕರ್ ಲಿಂಗ ನವರ್ ಸಂತೋಷ್ ಮಧುಗೆ ಕರ್ ಮುಂತಾದವರು ಉಪಸ್ಥಿತರಿದ್ದರು