ಬೆಳಗಾವಿ : ಪಾಟೀಲ ಗಲ್ಲಿ ಕಣಬರ್ಗಿಯಲ್ಲಿ ಶಿವಪ್ರತಾಪ ದಿನದ ನಿಮಿತ್ಯ ಶೌರ್ಯ ದಿನ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರೊಂದಿಗೆ ಕಣಬರ್ಗಿ ಗ್ರಾಮದ ಪ್ರಮುಖ ಹಿರಿಯರು, ಪಂಚ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
ಶೌರ್ಯ ದಿನದ ನಿಮಿತ್ತ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ನಾಟಕ ಪ್ರದರ್ಶನ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.
ಈ ವೇಳೆ ಕಾರ್ಯಕ್ರಮವು ಯಶಸ್ವಿಯಾಗಲೆಂದು ಹರಿಸಿದ ಶಾಸಕರು ಇಂದಿನ ಯುವಕರು ಛತ್ರಪತಿ ಶಿವಾಜಿ ಮಹಾರಾಜರಂತೆ ಧರ್ಮದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನಂತರದಲ್ಲಿ ಆಯೋಜಕರು ಹಾಗೂ ಗ್ರಾಮದ ಹಿರಿಯರು ಶಾಸಕ ಅನಿಲ ಬೆನಕೆರವರನ್ನು ಮತ್ತು ಇತರ ಮುಖಂಡರುಗಳನ್ನು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸತ್ಕಾರವನ್ನು ಮಾಡಿದರು.
ಸಾವಿರಾರು ಸಂಖ್ಯೆ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಆಯೋಜಿಸಿದ ನಾಟಕ ಪ್ರದರ್ಶನಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಶ್ರೀ. ಸಿದ್ದೇಶ್ವರ ಮಂದಿರ ಪಂಚ ಕಮೀಟಿ ಸದಸ್ಯರು, ಭಕ್ತಾದಿಗಳು, ಗ್ರಾಮದ ಹಿರಿಯರು, ಗ್ರಾಮದ ನಾಗರಿಕರು, ಮಹಿಳೆಯರು, ಯುವಕರು ಹಾಗೂ ಶಿವಪ್ರೇಮಿಗಳು ಉಪಸ್ಥಿತರಿದ್ದರು.