ಸರ್ಕಾರಿ ಪ್ರೌಢಶಾಲೆ ಕತ್ರಿದಡ್ಡಿ ಶಾಲಾವಿದ್ಯಾರ್ಥಿಗಳು ಕತ್ತಲದಿಂದ ವಿದ್ಯಾಭ್ಯಾಸಕ್ಕೆ ಆಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾವೇ ಹೊಸ ಸಂಶೋಧನೆ ಮಾಡಿ ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುವುದರ ಮೂಲಕ ಸರಕಾರಿ ಶಾಲೆ ಮಕ್ಕಳು ಎಲ್ಲದಕ್ಕೂ ಸೈ ಎನ್ನುವುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.
ಆರು ಜನ ವಿದ್ಯಾರ್ಥಿಗಳಾದ ಸುದೀಪ್ ಹತ್ತಿ , ಸುನಿಲ ಮಾಶೇಕರ್, ಗಂಗಪ್ಪ ಈಗಣಿ, ಸುದೀಪ್ ತೋಪು ಕಾಣಿ, ಪ್ರೇಮ್ ಕುಮಾರ್ ಮಾರುತಿ ಹಟ್ಟಿ ಹೋಳಿ, ಮಹಾದೇವ್ ದವ್ದಾಡ, 9ನೇ ತರಗತಿಯ ವಿದ್ಯಾರ್ಥಿಗಳು ಲೈಟೆ ಬೆಳಕಿನ ಮೂಲವನ್ನು ಬಳಸಿಕೊಂಡು ನೂತನ ಮಾದರಿಯ ಪೆನ್ನನ್ನು ರಚಿಸಿದ್ದಾರೆ.
ತಮ್ಮ ಗ್ರಾಮದಲ್ಲಿ ಆಗಾಗ ವಿದ್ಯುತ್ ಕಡಿತದಿಂದಾಗುವ ಸಮಸ್ಯೆಗೆ, ವಿದ್ಯಾಭ್ಯಾಸಕ್ಕೆ ಆಗುವ ತೊಂದರರಗರ ತಾವೇ ಪರಿಹಾರ ಹುಡುಕಿಕೊಂಡಿದ್ದಾರೆ. ತಮ್ಮ ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಲೈಫ್ ಸ್ಟಾರ್ ಪೆನ್ನಿಗೆ ಜೋಡಿಸಿ ಬೆಳಕಿನ ಮೂಲವನ್ನು ಕಂಡುಹಿಡಿದಿದ್ದಾರೆ.
ಇದಕ್ಕೆ ಪ್ರೋತ್ಸಾಹ ನೀಡಿದ ಸರಕಾರಿ ಪ್ರೌಢಶಾಲಾ ಕತ್ರಿದೊಡ್ಡಿ ಶಿಕ್ಷಕರು, ಈ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ವಿವಿಧ ಸಂಘಟನೆಗಳಿಗೆ ಸಂಪರ್ಕ ಮಾಡಿದಾಗ ಲೈಫ್ ಸ್ಟಾರ್ ಗ್ರೂಪಿನ ಯುವ ಉದ್ಯಮಿ ಎಜುಕೇಷನ್ ಇಂಡಿಯಾ ಸಂಸ್ಥಾಪಕ ಮತ್ತು ಸಿಇಓ ಡಾ. ಮಂಜುನಾಥ್ ಜೈನ್ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಮುಂದೆ ಬಂದಿದ್ದಾರೆ.
ವಿದ್ಯಾರ್ಥಿಗಳು ತಯಾರಿಸಿರುವ ಲೈಟ್ ಅಳವಡಿಸಿರುವ ಪೆನ್ ಅನ್ನು ಉತ್ಪಾದನೆಗೋಸ್ಕರ 20 ಲಕ್ಷ ಹೂಡಿಕೆ ಮಾಡಿದ್ದಾರೆ. ಮತ್ತು ಅವರಿಗೆ 10000 ಪೆನ್ನುಗಳ ಮೊದಲ ಆರ್ಡರ್ವನ್ನು ನೀಡಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ಒಂದು ಆಶಾಕಿರಣವಾಗಲಿದೆ ಎಂಬುವುದರಲ್ಲಿ ಸಂಶಯವಿಲ್ಲ. ತರೆಯ ಮರೆಯಲ್ಲಿ ಬೆಳೆಯುತ್ತಿರುವ ಈ ಪ್ರತಿಭೆಗಳಿಗೆ ಈ ರೀತಿ ಸಂಸ್ಥೆಗಳು ಮುಂದೆ ಬಂದು ಅವಕಾಶ ನೀಡಿದರೆ ಅವರ ಉತ್ತಮ ಭವಿಷ್ಯಕ್ಕೆ ದಾರಿಯಾಗಲಿದೆ ಎಂದು ನಾವು ಹೇಳಬಹುದು