ದಿ ಮಾರ್ಕಂಡೇಯ ಕೋ ಆಪರೇಟಿವ್ಹ ಶುಗರ್ ಮೀಲ್ ಲಿ., ಕಾಕತಿ ಬೆಳಗಾವಿ ಆಡಳಿತ ಮಂಡಳ ಮಂಡಳಿಯ ಸಂಜೆ 4:00ಘ ಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡು 4:30 ಕ್ಕ ಮತ ಎಣಿಕೆ ಪ್ರಾರಂಭವಾಯಿತು.
ಸಕ್ಕರೆ ಕಾರ್ಖಾನೆ ಚುನಾವಣೆಯ ಒಟ್ಟು 15 ಸ್ಥಾನಗಳಿಗೆ ಮತದಾನ ನಡೆದಿತ್ತು ಅದರಲ್ಲಿ ಸಾಮಾನ್ಯ 7, ಪರಿಶಿಷ್ಟ ಜಾತಿ 1 ಪ್ರಶಿಷ್ಟ ಪಂಗಡ 1, ಹಿಂದುಳಿದ ಪ್ರವರ್ಗ ” ಎ” ಹಿಂದುಳಿದ ಪ್ರವರ್ಗ “ಬಿ”1, ಮಹಿಳಾ 2, ಸಹಕಾರ ಸಂಘ ಬಿ ವರ್ಗ 1 ಕಬ್ಬು ಬೆಳೆಗಾರರಲ್ಲದ ಸದಸ್ಯರು ಡಿ ವರ್ಗ 1ಒಟ್ಟು 15 ಸ್ಥಾನಗಳಗೆ ಫಲಿತಾಂಶ 6:00ಗೆ ಮೊದಲನೇ ಫಲಿತಾಂಶ ಸೇತಕರಿ ಸುನಿಲ್ ಮಲ್ಲಪ್ಪ ಅಷ್ಟೇ ಕರ, ಗೆಲುವು ಸಾಧಿಸಿ ಈ ಗೆಲವು ನಿರಂತರವಾಗಿ ಸೇತುಕರಿ ಬಚಾವ್ ಪ್ಯಾನೆಲಿನ ಗೆಲುವಿಗೆ ನಾಂದಿ ಹಾಡಿತು.
15 ರಲ್ಲಿ 12 ಸ್ಥಾನಗಳನ್ನು ಗೆದ್ದ ಸೇತುಕರಿ ಬಚಾವ್ ಪ್ಯಾನೆಲ್ ಆಡಳಿತ ಚುಕ್ಕಾಣಿಯನ್ನು ಹಿಡಿಯುವುದರಲ್ಲಿ ಯಶಸ್ವಿವಾತು 3 ಸ್ಥಾನಗಳಿಗೆ ಅಭಿನಾಶ್ ರಾಮ್ ಭಾವು ಪೋತದಾರ್ ಪ್ಯಾನಲ್ ಸೀಮಿತಗೊಂಡಿತು.
ಮತ ಎಣಿಕೆಯ ಪ್ರಕ್ರಿಯೆ ಮುಗಿಯುವ ಅಷ್ಟರಲ್ಲಿ ಪರಿಶಿಷ್ಟ ವರ್ಗದ ಅಭ್ಯರ್ಥಿಗಳಾದ ಪರಶುರಾಮ್ ಕೋಲಕಾರ ಹಾಗೂ ಚೇತಕುಮಾರ ಎಲ್ಲಪ್ಪ ಕಾಂಬಳೆ, ಅವರ ಮಧ್ಯೆ ತೀವ್ರ ಪೈಪೋಟಿ ನಡೆಯಿತು. ಚೇತಕ್ ಕುಮಾರ್ ಎಲ್ಲಪ್ಪ ಕಾಂಬಳೆ 660 ಮತಗಳನ್ನು ಪಡೆದರೆ ಪರಶುರಾಮ್ ಕೋಲಕಾರ ಅವರು 658 ಮತಗಳನ್ನು ಪಡೆದು ಎರಡು ಮತಗಳ ಅಂತರದಲ್ಲಿ ಚೇತ ಕುಮಾರ್ ಕಾಂಬಳೆ ವಿಜಯಶಾಲಿಯಾದರು.
ಈ ಸಂದರ್ಭದಲ್ಲಿ ಕೆಲವು ಹೊತ್ತು ಗೊಂದಲ ನಿರ್ಮಾಣವಾದಾಗ ಪರಶುರಾಮ್ ಕೋಲಾರ ಅವರು ಮತ್ತೊಮ್ಮೆ ಮತ ಏನಿಕ್ಕೆ ಮಾಡಿ ಎಂದು ಕೋರಿಕೊಂಡಾಗ ಚುನಾವಣೆ ಸಿಬ್ಬಂದಿ ಮತ ಏನಿಕ್ಕೆ ಪರಿಶೀಲನೆ ಮಾಡಿದರು.
ಆಗ ಚತಕ ಕುಮಾರ್ ಎಲ್ಲಪ್ಪ ಕಾಂಬಳೆ ಅಧಿಕೃತಕವಾಗಿ ವಿಜಯಶಾಲಿ ಎಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದರು. ಸೇತುಕರಿ ಬಚಾವ್ ಪ್ಯಾನೆಲ್ ಸದಸ್ಯರಾದ ಮಾಜಿ ಮಹಾಪೂರ ಶಿವಾಜಿ ಸುಟುಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಜಯ ಪ್ರತಿಯೊಬ್ಬ ರೈತನ ವಿಜಯವಾಗಿದೆ. ತನಜಿ ಪಾಟೀಲ್ ಹಾಗೂ ಆರ್ ಐ ಪಾಟೀಲ್ ಅವರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಹಾಗೂ ಆರ್ಥಿಕ ವಾಗಿ ಸಬಲಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸುತ್ತಾ ಅವಿನಾಶ್ ರಾಮ್ ಭಾವು ಪೋತದಾರ್ ಪ್ಯಾನಲಿನ ಚುನಾಯಿತ ಗೊಂಡ ಎಲ್ಲಾ ಸದಸ್ಯರುಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಈ ಭಾಗದ ರೈತರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಾ, ಈ ತಾಲೂಕಿನ ಸಕ್ಕರೆ ಕಾರ್ಖಾನೆಯನ್ನು ನೀವೆಲ್ಲರೂ ಸೇರಿ ಸಮೃದ್ಧಿ ಗೊಳಿಸುತ್ತೇನೆಂದು ವಿಶ್ವಾಸವಿದೆ ಅಭಿಪ್ರಾಯಪಟ್ಟರು.