Ad imageAd image

ಬೆಳಗಾವಿ: ತಹಶೀಲ್ದಾರ್​ ಕಚೇರಿಯಲ್ಲೇ ಎಸ್​ಡಿಎ ರುದ್ರಣ್ಣ ಆತ್ಮಹತ್ಯೆ

ratnakar
ಬೆಳಗಾವಿ: ತಹಶೀಲ್ದಾರ್​ ಕಚೇರಿಯಲ್ಲೇ ಎಸ್​ಡಿಎ ರುದ್ರಣ್ಣ ಆತ್ಮಹತ್ಯೆ
WhatsApp Group Join Now
Telegram Group Join Now

ಬೆಳಗಾವಿ: ತಹಶೀಲ್ದಾರ್ (Tehsildar)​ ಕಚೇರಿಯಲ್ಲೇ ದ್ವಿತೀಯ ದರ್ಜೆ ಸಹಾಯಕರೊಬ್ಬರು (SDA) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ. ಬೆಳಗಾವಿ ತಹಶೀಲ್ದಾರ್​ ಬಸವರಾಜ ನಾಗರಾಳ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ್ (35) ನೇಣಿಗೆ ಶರಣಾಗಿದ್ದಾರೆ. ರುದ್ರಣ್ಣ ಯಡವಣ್ಣವರ್ ಅವರನ್ನು ಸವದತ್ತಿ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿ ಬೆಳಗಾವಿ ‌ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೋಮವಾರ (ನ.05) ಆದೇಶ ಹೊರಡಿಸಿದ್ದರು.

ರುದ್ರಣ್ಣ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರುದ್ರಣ್ಣ ಅವರ ಪತ್ನಿ ಗಿರಿಜಾ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಎಫ್​ಎಸ್​​ಎಲ್​ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

“ನನ್ನ (ರುದ್ರಣ್ಣ) ಸಾವಿಗೆ ತಹಶೀಲ್ದಾರ್​​​ ಬಸವರಾಜ್ ನಾಗರಾಳ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪಿಎ ಸೋಮು” ಕಾರಣ ಅಂತ ಸೋಮವಾರ (ನ.04) ಸಂಜೆ ತಹಶೀಲ್ದಾರ್​ ಕಚೇರಿ ವಾಟ್ಸಾಪ್​​ ಗ್ರೂಪ್​ನಲ್ಲಿ ರುದ್ರಣ್ಣ ಯಡವಣ್ಣವರ್ ಸಂದೇಶ ಕಳುಹಿಸಿದ್ದರು. “ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ” ಎಂದು ಮೆಸೇಜ್ ಹಾಕಿದ್ದರು.​

ರುದ್ರೇಶ್ ತಾಯಿ ಮಲ್ಲವ್ವ ಮಾತನಾಡಿ, ಸೋಮವಾರ ರಾತ್ರಿ ಇಬ್ಬರು ಸೇರಿಕೊಂಡು ಊಟ ಮಾಡುತ್ತಿದ್ದೇವು. ಊಟ ಮಾಡುವಾಗ ಯಾರದ್ದೋ ಫೋನ್​ ಬಂತು. ಫೋನ್​ ಬರುತ್ತಿದ್ದಂತೆ ಅರ್ಧಕ್ಕೆ ಊಟ ಬಿಟ್ಟನು. ಏನಾಯ್ತು ಅಂತ ಕೇಳಿದರೂ ಎನೂ ಹೇಳಲಿಲ್ಲ. ಫೋನ್​ ಮಾಡಿದವರು ಯಾರು ಅಂತ ಗೊತ್ತಾಗಲಿಲ್ಲ. ಮನೆಯಲ್ಲಿ ಕಿರುಕುಳ ಬಗ್ಗೆ ಎನೂ ಹೇಳುತ್ತಿರಲಿಲ್ಲ. ರಾತ್ರಿ ಮಲಗಿದ, ಬೆಳಗ್ಗೆ ಯಾವಾಗ ಕಚೇರಿಗೆ ಹೋಗಿದ್ದಾನೆ ಗೊತ್ತಿಲ್ಲ. ವಾಚ್, ಮೊಬೈಲ್, ಹೆಲ್ಮೆಟ್ ಮನೆಯಲ್ಲೇ ಇದ್ದವು. ವಾಕಿಂಗ್ ಹೋಗಿದ್ದಾನೆ ಅಂತ ಅಂದುಕೊಂಡು ಸುಮ್ಮನಾಗಿದ್ದೇವು. ಆದರೆ ಈ ರೀತಿ ಮಾಡಿಕೊಳ್ಳುತ್ತಾನೆ ಅಂತ ಅಂದುಕೊಂಡಿರಲಿಲ್ಲ ಎಂದು ಕಣ್ಣೀರು ಹಾಕಿದರು.

ಎರಡು ತಿಂಗಳ ಹಿಂದೆ ಎರಡು ಲಕ್ಷ ರೂಪಾಯಿ ಇಸಿದುಕೊಂಡಿದ್ದನು. ಇಲ್ಲೇ ವರ್ಗಾವಣೆ ಮಾಡಿಸಿಕೊಳ್ಳುತ್ತೇನೆ ಅಂತ ಹಣ ಇಸಿದುಕೊಂಡು ಹೋಗಿದ್ದನು. ಯಾರಿಗೆ ಹಣ ಕೊಟ್ಟ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article