spot_img
spot_img
spot_img
18 C
Belagavi
Thursday, September 29, 2022
spot_img

ಧಾರವಾಡದಲ್ಲಿ ಸಾವರ್ಕರ್‌ ಫೋಟೋ ಸುಟ್ಟ ಪ್ರಕರಣ : ಕಾಂಗ್ರೆಸ್‌ನ 12 ಕಾರ್ಯಕರ್ತರ ವಿರುದ್ಧ FIR

spot_img

ಧಾರವಾಡ: ನಗರದಲ್ಲಿ ಸಾವರ್ಕರ್‌ ಫೋಟೋ ಸುಟ್ಟ ಪ್ರಕರಣ ಸಂಬಂಧಿಸಿ ಕಾಂಗ್ರೆಸ್‌ನ 12 ಕಾರ್ಯಕರ್ತರ FIR ದಾಖಲಿಸಲಾಗಿದೆ.

ನಿನ್ನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆಯಲ್ಲಿ ವೀರ್​ ಸಾವರ್ಕರ್​ ಅವರ ಭಾವಚಿತ್ರಕ್ಕೆ ಮೊಟ್ಟೆ ಒಡೆದು, ಬಳಿಕ ಕಾಲಿನಲ್ಲಿ ಭಾವಚಿತ್ರ ತುಳಿದು ಅವಮಾನ ಮಾಡಿದ್ದಾರೆ.

ಈ ವೇಳೆ ಕಾರ್ಯಕರ್ತರು ಪೂರ್ವ ನಿಯೋಜಿತವಾಗಿ ಐದಾರು ಭಾವಚಿತ್ರ ತಂದಿದ್ದರು. ಪೊಲೀಸ್ ಬಂದೋಬಸ್ತ್ ಮಧ್ಯೆಯೇ ಸಾವರ್ಕರ್ ಭಾವಚಿತ್ರಕ್ಕೆ ಅವಮಾನ, ಸುಟ್ಟು ಹಾಕಿದರು.

ಕಾಂಗ್ರೆಸ್ ಕಾರ್ಯಕರ್ತರಿಂದ ವೀರ್ ಸಾವರ್ಕರ್ ಫೋಟೋ ಸುಟ್ಟ ಹಿನ್ನೆಲೆ ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಧಾರವಾಡದ ಉಪ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ್ದಾರೆ.

ಸಾವರ್ಕರ್ ಫೋಟೋ ಸುಟ್ಟವರನ್ನು ಬಂಧಿಸುವಂತೆ ಧಾರವಾಡ-ಬೆಳಗಾವಿ ರಸ್ತೆ ತಡೆದು ಬಿಜೆಪಿ ಮತ್ತು ಹಿಂದೂಪರ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಭಜರಂಗದಳದ ಮುಖಂಡ ಶಿವಾನಂದ ಸತ್ತಿಗೇರಿ ಧಾರವಾಡ ಉಪಠಾಣೆಗೆ ದೂರು ನೀಡಿದ್ದರು. ಇಂದು ಧಾರವಾಡ ಉಪಠಾಣೆಯಲ್ಲಿ ಕಾಂಗ್ರೆಸ್‌ನ 12 ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ

spot_img

Related News

ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

ಬೆಂಗಳೂರು: ಇಡಿ ಅಧಿಕಾರಿಗಳ ದಾಳಿಯ ಬಳಿಕ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕೇಂದ್ರ ತನಿಖಾ ದಳದ ಅಧಿಕಾರಿಗಳು ಡಿ ಕೆ ಶಿವಕುಮಾರ್...

ಮೂರು ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚವ್ಹಾಣ್ ನೇಮಕ

ನವದೆಹಲಿ: ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚವ್ಹಾಣ್ ಅವರನ್ನು ನೂತನ ಸಿಡಿಎಸ್ ಆಗಿ ನೇಮಕ ಮಾಡಲಾಗಿದೆ. ಎರಡನೇ ಸಿಡಿಎಸ್ ಅನಿಲ್ ಚವ್ಹಾಣ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -